ಮಗಳ ಮದುವೆ ಸಂಭ್ರಮಕ್ಕೆ ಅಣಿಯಾದ ಕ್ರೇಜಿಸ್ಟಾರ್ ರವಿಚಂದ್ರನ್

ಜಿಸ್ಟಾರ್ ರವಿಚಂದ್ರನ್ ಈಗ ಮಗಳ ಮದುವೆ ಸಂಭ್ರಮಕ್ಕೆ ಅಣಿಯಾಗುತ್ತಿದ್ದಾರೆ. ರವಿಚಂದ್ರನ್ ಪುತ್ರಿ ಗೀತಾಂಜಲಿ ಅವರ ನಿಶ್ಚಿತಾರ್ಥ ನಾಳೆ (ಶುಕ್ರವಾರ) ನೆರವೇರಲಿದೆ.
ರವಿಚಂದ್ರನ್ ಕುಟುಂಬ
ರವಿಚಂದ್ರನ್ ಕುಟುಂಬ
Updated on
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಮಗಳ ಮದುವೆ ಸಂಭ್ರಮಕ್ಕೆ ಅಣಿಯಾಗುತ್ತಿದ್ದಾರೆ. ರವಿಚಂದ್ರನ್ ಪುತ್ರಿ ಗೀತಾಂಜಲಿ ಅವರ ನಿಶ್ಚಿತಾರ್ಥ ನಾಳೆ (ಶುಕ್ರವಾರ) ನೆರವೇರಲಿದೆ.
ಬೆಂಗಳೂರಿನ ಉದ್ಯಮಿ ಅಜಯ್ ಎನ್ನುವವರ ಜತೆ ಗೀತಾಂಜಲಿ ನಿಶ್ಚಿತಾರ್ಥ ನಡೆಯಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ರವಿಚಂದ್ರನ್ ಆಪ್ತರಷ್ಟೇ ಇದರಲ್ಲಿ ಭಾಗವಹಿಸಲಿದ್ದಾರೆ.
ರವಿಚಂದ್ರನ್ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಮನೋರಂಜನ್ ಹಾಗೂ ವಿಕ್ರಮ್ ಇಬ್ಬರೂ ಇದಾಗಲೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಗೀತಾಂಜಲಿ ನಿಶ್ಚಿತಾರ್ಥ ನಡೆಯುತ್ತಿದ್ದು ರವಿಚಂದ್ರನ್ ತಮ್ಮ ಮಗಳ ಮದುವೆಯ ಸಂಭ್ರಮ, ಸಡಗರದಲ್ಲಿ ತೊಡಗಿಕೊಂಡಿದ್ದಾರೆ.
ಸದ್ಯ ಯಾವುದೇ ಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಕೊಳ್ಳದ ನಟ ಕೆಲವು ರಿಯಾಲಿಟಿ ಶೋ ಹಾಗೂ ಕೆಲ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಗೀತಾಂಜಲಿ-ಅಜಯ್ ಅವರ ಮದುವೆ ದಿನಾಂಕ, ಸ್ಥಳ ಯಾವುದೂ ಇನ್ನೂ ನಿಗದಿಯಾಗಿಲ್ಲ. ನಾಳಿನ ನಿಶ್ಚಿತಾರ್ಥದ ಬಳಿಕ ಈ ಕುರಿತ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com