'ಯುವರತ್ನ'ನಿಗೆ ಸಯ್ಯೇಷಾ ಸೈಗಲ್ ಜೋಡಿ!

ರಾಜಕುಮಾರ ಹಿಟ್ ಸಿನಿಮಾ ಬಳಿಕ ಮತ್ತೆ ಒಂದಾಗಿರುತ್ತಿರುವ ನಿರ್ದೇಶಕ ಆನಂದ್ ರಾಮ್ ಹಾಗೂ ನಟ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಿನಿಮಾಗೆ ...
ಸಯ್ಯೇಷಾ ಸೈಗಲ್ ಮತ್ತು ಪುನೀತ್ ರಾಜ್ ಕುಮಾರ್
ಸಯ್ಯೇಷಾ ಸೈಗಲ್ ಮತ್ತು ಪುನೀತ್ ರಾಜ್ ಕುಮಾರ್
Updated on: 
ಬೆಂಗಳೂರು: ರಾಜಕುಮಾರ ಹಿಟ್ ಸಿನಿಮಾ ಬಳಿಕ ಮತ್ತೆ ಒಂದಾಗಿರುತ್ತಿರುವ ನಿರ್ದೇಶಕ ಆನಂದ್ ರಾಮ್ ಹಾಗೂ ನಟ ಪುನೀತ್ ರಾಜ್ ಕುಮಾರ್  ಅವರ ಯುವರತ್ನ ಸಿನಿಮಾಗೆ ನಟಿ ಸಯ್ಯೇಷಾ ಸೈಗಲ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಸಿನಿಮಾದ ಟೈಟಲ್ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಿದ್ದ ಯುವರತ್ನ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಚಿತ್ರತಂಡ ಉತ್ತರ ನೀಡಿದ್ದು, ಸಯ್ಯೇಷಾ ಸೈಗಲ್ ಅಪ್ಪುಗೆ ನಾಯಕಿ ಎಂದು ಅಧಿಕೃತವಾಗಿ ಪ್ರಕತಟಿಸಿದೆ,
ಯುವರತ್ನ ಸಿನಿಮಾ ಘೋಷಣೆ ಆದ ದಿನದಿಂದಲೂ ಕೂಡ ಚಿತ್ರ ನಾಯಕಿ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲ ಹೊಂದಿದ್ದರು. ಟಾಲಿವುಡ್ ನಟಿ ತಮನ್ನಾ ಸೇರಿದಂತೆ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ಅವರೊಂದಿಗೆ ಅಭಿನಯಿಸಿದ್ದ ಅನುಪಮಾ ಪರಮೇಶ್ವರನ್ ಅವರ ಹೆಸರು ಕೂಡ ಕೇಳಿ ಬಂದಿತ್ತು.
ಈಗಾಗಲೇ ಶೂಟಿಂಗ್ ಆರಂಭವಾಗಿದ್ದು, ಮಂಗಳೂರಿನಲ್ಲಿ ಫೈಟಿಂಗ್ ಸನ್ನಿವೇಶ ಚಿತ್ರೀಕರಿಸಲಾಗಿದೆ, ಮುಂದಿನ ಸೋಮವಾರ ಧಾದವಾಡದಲ್ಲಿ ಸಿನಿಮಾ ಶೂಟಿಂಗ್ ಆರಂಭಗೊಳ್ಳಲಿದೆ, ಸಯ್ಯೇಷಾ ಬುಧವಾರ ಸೆಟ್ ಗೆ ಸೇರ್ಪಡೆಗೊಳ್ಳಲಿದ್ದಾರೆ. ಸಿನಿಮಾಗೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದು,ಪವರ್ ಆಫ್ ಯೂತ್ ಎಂಬ ಟ್ಯಾಗ್ ಲೈನ್ ಹೊಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com