ನಾಥೂರಾಮ್ ಗೆ ನಾಯಕಿಯಾಗಲಿದ್ದಾಳೆ 'ಮಗಳು ಜಾನಕಿ' ಖ್ಯಾತಿಯ ಗಾನವಿ ಲಕ್ಷ್ಮಣ್

ಇತ್ತೀಚೆಗೆ ತೆರೆಕಂಡ ಬೆಲ್ ಬಾಟಮ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೆ ರಿಶಬ್ ಶೆಟ್ಟಿ ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರೆ....
ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್
ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್
Updated on
ಇತ್ತೀಚೆಗೆ ತೆರೆಕಂಡ ಬೆಲ್ ಬಾಟಮ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೆ ರಿಶಬ್ ಶೆಟ್ಟಿ ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರೆ.
ಕಿರುತೆರೆ ನಿರ್ದೇಶಕ ವಿನು ಬಳಂಜ ಬೆಳ್ಳಿತೆರೆಗಾಗಿ ಮೊದಲ ಬಾರಿ ನಾಥೂರಾಮ್ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ, ನಾಥೂರಾಮ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದು, ಚಿತ್ರತಂಡ ಗಾನವಿ ಲಕ್ಷ್ಮಣ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ.
ಮೂಲತಃ ಡ್ಯಾನ್ಸರ್ ಆಗಿರುವ ಗಾನವಿ ಟಿ.ಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರವಾಹಿ ಮೂಲಕ  ಕಿರುತೆರೆಗೆ ಪಾದಾರ್ಪಣೆ ಮಾಡಿದರು.  ಇದರ ಜೊತೆಗ ನಾಥೂರಾಮ್ ಸಿನಿಮಾ ಮೂಲಕ  ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಗಾಂಧಿ ಅನುಯಾಯಾಗಿ ರಿಷಭ್ ಶೆಟ್ಟಿ ನಟಿಸುತ್ತಿದ್ದು, ಗಾನವಿ, ಕಸ್ತೂರಿ ಎಂಬ ಪಾತ್ರದಲ್ಲಿ ಅಭಿನಯಿಸಲಿದ್ದಾರೆ, ಧಾರಾವಾಹಿಯಲ್ಲಿ ಆಕೆಯ ನಟನೆ ನೋಡಿ ಮೆಚ್ಚಿರುವ ಚಿತ್ರತಂಡ ನಾಯಕಿಯಾಗಿ ಆಯ್ಕೆ ಮಾಡಿದೆ, ಶೀಘ್ರವೇ ಪ್ರೊಡಕ್ಷನ್ ಹೌಸ್ ಅಧಿಕೃತ ಮಾಹಿತಿ ಪ್ರಕಟಿಸಲಿದೆ. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com