'ಟಗರು ಪುಟ್ಟಿ' ಮಾನ್ವಿತಾ ಕಾಮತ್ ಬಾಲಿವುಡ್ ಗೆ ಎಂಟ್ರಿ?

ಕನ್ನಡದ ಮತ್ತೊಬ್ಬ ನಟಿ ಬಿ-ಟೌನ್ ಗೆ ಎಂಟ್ರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ, ಟಗರು ಸಿನಿಮಾದಲ್ಲಿ ನಟಿಸಿದ್ದ ಮಾನ್ವಿತಾ ಕಾಮತ್ ಸದ್ಯ
ಮಾನ್ವಿತಾ ಕಾಮತ್
ಮಾನ್ವಿತಾ ಕಾಮತ್
Updated on
ಬೆಂಗಳೂರು:  ಕನ್ನಡದ ಮತ್ತೊಬ್ಬ ನಟಿ ಬಿ-ಟೌನ್ ಗೆ ಎಂಟ್ರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ, ಟಗರು ಸಿನಿಮಾದಲ್ಲಿ ನಟಿಸಿದ್ದ ಮಾನ್ವಿತಾ ಕಾಮತ್  ಸದ್ಯ ಮುಂಬಯಿಯಲ್ಲಿ ಠಿಕಾಣಿ ಹೂಡಿದ್ದಾರೆ. 
ಇತ್ತೀಚೆಗೆ ಮಾನ್ವಿತಾ,  ಮೋಹಿತ್ ಹೊಲಾನಿ  ಅವರ ಬಳಿ ಫೋಟೋಶೂಟ್ ಮಾಡಿಸಿದ್ದು ಸದ್ಯ ಟಾಕ್ ಆಪ್ ದ ಟೌನ್ ಆಗಿದೆ, ನಾನು ಮುಂಬಯಿಯಲ್ಲಿ ಇದ್ದೇನೆ, ಇದೆಲ್ಲಾ ನನಗೆ ಹೊಸ ಅನುಭವ ಎಂದು ಹೇಳಿದ್ದಾರೆ.
ಇಲ್ಲಿ ಹಲವು ವಿಷಯಗಳು ನನಗೆ ತುಂಬಾ ಆಸಕ್ತಿ ಕೆರಳಿಸಿದೆ.ಆದರೆ ಅಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಮಾನ್ವಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,
2018ರಲ್ಲಿ ಟಗರು ಹೊರತಾಗಿ ಇನ್ನೆರಡು ಸಿನಿಮಾದಲ್ಲಿ ಮಾನ್ವಿತಾ ನಟಿಸಿದ್ದರು,  ಆರ್ ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಗಲ್ಲಾ ಪೆಟ್ಟಿಗೆಯಲ್ಲಿ ಹೆಚ್ಚುಸದ್ದು ಮಾಡಲಿಲ್ಲ,  ಹಾಗೆಯೇ ಚಂದ್ರಶೇಖರ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರದಲ್ಲಿಯೂ ನಟಿಸಿದ್ದರು, ಸದ್ಯ ಮಾನ್ವಿತಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ  ಮಾನ್ವಿತಾ ಅಭಿನಯಿಸುತ್ದಿದ್ದಾರೆ, ವಶಿಷ್ಟ ಸಿಂಹ ಜೊತೆ ಅಭಿನಯಿಸಿದ್ದಾರೆ. ಇನ್ನೂ  10 ದಿನಗಳ ಶೂಟಿಂಗ್ ಮಾತ್ರ ಬಾಕಿಯಿದೆ.
ಇದೇ ವೇಳೆ ಧಿರೇನ್ ರಾಜ್ ಕುಮಾರ್ ನಟನೆಯ ದಾರಿ ತಪ್ಪಿದ ಮಗ ಸಿನಿಮಾದಲ್ಲಿ ಮಾನ್ವಿತಾ ನಟಿಸುತ್ತಿದ್ದಾರೆ,ಜನವರಿ 16 ರಿಂದ ಶೂಟಿಂಗ್ ಆರಂಭವಾಗಲಿದೆ. ಇದೊಂದು ಉತ್ತಮ ಪಾತ್ರವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com