ರಿಲೀಸ್ ದಿನಾಂಕ ಹತ್ತಿರ ಬರುತ್ತಿರುವಂತೆ ನಾನು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗೂಗ್ಲಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ಈಗ ಕೆಜಿಎಫ್ ಸಿನಿಮಾ ಬಿಡುಗಡೆ ಸಮಯದಲ್ಲಿ ಸಮಸ್ಯೆಗಳು ಎದುರಾದವು, ಸವಾಲುಗಳು ಮತ್ತು ಸಮಸ್ಯೆಗಳು ನನ್ನನ್ನು ಮತ್ತಷ್ಟು ಗಟ್ಟಿಯಾಗಿಸುತ್ತವೆ. ನಾನು ಕೇವಲ ಯಶಸ್ಸನ್ನೇ ನೋಡುತ್ತಿದ್ದರೇ ವೈಫಲ್ಯದ ಅರ್ಥ ಗೊತ್ತಾಗುವುದಿಲ್ಲ, ನಾನು ಸಮಸ್ಯೆ ಬಗೆಹರಿಸಲು ಮುಂದಾದಾಗ ನಾನು ಮತ್ತಷ್ಟು ಪ್ರಬಲನಾಗುತ್ತೇನೆ, ಜನ ನನ್ನೊಂದಿಗೆ ಇರುವುದರಿಂದ , ಯಾವುದು ನನ್ನನ್ನು ನಿಲ್ಲಿಸಲು ಸಾಧ್ಯವಿಲ್ಲ, ಇಡೀ ರಾಜ್ಯವೇ ನನ್ನೊಂದಿಗಿತ್ತು, ಇದು ನನಗೆ ಅಪಾರ ಸಂತೋಷ ತಂದಿದೆ, ಅವರೆಲ್ಲಾ ನನ್ನ ಜೊತೆ ಇರುವವರೆಗೂ ಇಡೀ ಪ್ರಪಂಚದಲ್ಲಿ ಏನನ್ನೂ ಬೇಕಾದರೂ ಎದುರಿಸುತ್ತೇನೆ ಎಂದು ಹೇಳಿದ್ದಾರೆ.