ಹೇಮಂತ್, ಸಮೀಕ್ಷಾ ಅಭಿನಯವೇ '99' ಚಿತ್ರದ ಜೀವಾಳ: ಪ್ರೀತಮ್ ಗುಬ್ಬಿ

ಪ್ರೀತಮ್ ಗುಬ್ಬಿ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ "99" ಚಿತ್ರೀಕರಣ ಕಡಲತೀರದ ನಗರಿಯಲ್ಲಿ ನಡೆಯುತ್ತಿದೆ.
ಹೇಮಂತ್ ಹಾಗೂ ಸಮೀಕ್ಷಾ
ಹೇಮಂತ್ ಹಾಗೂ ಸಮೀಕ್ಷಾ
Updated on
ಬೆಂಗಳೂರು: ಪ್ರೀತಮ್ ಗುಬ್ಬಿ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ "99" ಚಿತ್ರೀಕರಣ ಕಡಲತೀರದ ನಗರಿಯಲ್ಲಿ ನಡೆಯುತ್ತಿದೆ. ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯಿಸಿದ್ದ "96" ಚಿತ್ರದಿಂದ ಸ್ಪೂರ್ತಿಗೊಂಡು ತಯಾರಾಗುತ್ತಿರುವ ಈ ಚಿತ್ರದಲ್ಲಿ ಗಣೇಶ್ ಗೆ ಭಾವನಾ ನಾಯಕಿಯಾಗಿದ್ದಾರೆ.
ಇನ್ನು ಪ್ರೀತಮ್ ತಮ್ಮ ಚಿತ್ರದಲ್ಲಿ 1999ನೇ ವರ್ಷದ ಕಥೆಯನ್ನು ಝೇಳಹೊರಟಿದ್ದು ಇದಕ್ಕಾಗಿ ಹೇಮಂತ್ ಹಾಗೂ ಸಮೀಕ್ಷಾ ಯುವ ನಾಯಕ, ನಾಯಕಿಯರಾಗಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಮಲೆನಾಡಿನ ದಟ್ಟ ಕಾನನದ ನಡುವಿನ ತೀರ್ಥಹಳ್ಳಿಯಲ್ಲಿ ಹೇಮಂತ್ ಹಾಗೂ ಸಮೀಕ್ಷಾ ನಟಿಸಿರುವ ಕಥಾಭಾಗವನ್ನು ಚಿತ್ರೀಕರಿಸಲಾಗಿದ್ದು ಇವರಿಬ್ಬರೂ "99" ಚಿತ್ರದ ಜೀವಾಳವಾಗಿದ್ದಾರೆ ಎಂದು ನಿರ್ದೇಶಕ ಪ್ರೀತಮ್ ಹೇಳುತ್ತಾರೆ. ಇಬ್ಬರೂ ಪ್ರತಿಭಾವಂತರಾಗಿದ್ದಾರೆ. ಸಮೀಕ್ಷಾ ಮೂಲತಃ ಶಿವಮೊಗ್ಗದವರೇ ಆಗಿದ್ದು ಕೆಲ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಹೇಮಂತ್ ಸಹ ಉತ್ತಮ ಕಲಾವಿದ, ಇವರಿಬ್ಬರೂ ಬಹಳಷ್ಟು ಜನಪ್ರಿಯ ನಟರಲ್ಲದ ಕಾರಣ ಚಿತ್ರದ ಕಥೆಗೆ ಹೊಸ ತಾಜಾತನವನ್ನು ನೀಡಲು ಸಹಾಯವಾಗಲಿದೆ ಎನ್ನುವುದು ನಿರ್ದೇಶಕರ ಆಂಬೋಣ.
"ಚಿತ್ರ ನಮ್ಮನ್ನು ಮತ್ತೆ 99ರ ಕಾಲಘಟ್ಟಕ್ಕೆ ಕರೆದೊಯ್ಯಲಿದೆ."ಪ್ರೀತಮ್ ಹೇಳುತ್ತಾರೆ. ಗಣೇಶ್ ಸೋಮವಾರದಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವ ಅರ್ಜುನ್ ಜನ್ಯ ಪಾಲಿಗೆ ಸಹ ಈ ಚಿತ್ರ ಮಹತ್ವದಾಗಿದೆ. ಅವರ ವೃತ್ತಿಜೀವನದ 100ನೇ ಚಿತ್ರವಿದಾಗಿದ್ದು ಏಳು ಹಾಡುಗಳು ಅವರ ಸಂಗೀತದಲ್ಲಿ ಮೂಡಿ ಬರುತ್ತಿದೆ. ಸಂತೋಷ್ ರೈ ಪತ್ತಾಜೆ ಛಾಯಾಗ್ರಹಣ ಇರುವ ಈ ಚಿತ್ರ ರಾಮು ಎಂಟರ್ಪ್ರೈಸಸ್ ನಲ್ಲಿ ತಯಾರಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com