ಬೆಂಗಳೂರು: ಅಭಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ರಮ್ಯಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಹೌದು ಕನ್ನಡ ಚಿತ್ರರಂಗದಲ್ಲಿಯೇ ಹೆಸರು ಮಾಡಿ, ನಂತರ ರಾಜಕೀಯಕ್ಕೆ ಇಳಿದು ಸಂಸದೆಯಾಗಿ ಆಯ್ಕೆಯಾಗಿದ್ದ ರಮ್ಯಾ ಅವರ ಟ್ವೀಟ್ ಇದೀಗ ವಿವಾದ ಎಬ್ಬಿಸಿದೆ.
ತಮಿಳು ನಟ ಧನುಷ್ ಅಭಿನಯದ ಮಾರಿ 2 ಚಿತ್ರದ ರೌಡಿ ಬೇಬಿ ಹಾಡು ಇದೀಗ ಯೂಟ್ಯೂಬ್ ನಲ್ಲಿ 100 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಈ ಸಿನಿಮಾದ ಹಾಡಿಗೆ ನಟಿ ರಮ್ಯಾ ಟ್ವೀಟರ್ ನಲ್ಲಿ ಶುಭ ಕೋರಿದ್ದು ಎಂತಹ ಹಾಡು ಡಿ!, ಹಾಡು 100 ಮಿಲಿಯನ್ ಆಗಿದೆ ಎಂದು ಹೊಗಳಿದ್ದಾರೆ.
What a song D! Make that 100M + 1 @thisisysr So happy for you! ❤️