ನಟ ಶಿವರಾಜ್ ಕುಮಾರ್ ನಿರ್ದೇಶಕ ಎಪಿ ಅರ್ಜುನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಶಿವಣ್ಣ ನಟಿಸುತ್ತಿರುವ ಈ ಸಿನಿಮಾಗೆ ರಾಯಲ್ ಇನ್ ಫೀಲ್ಡ್ ಎಂದು ಟೈಟಲ್ ಇಡಲಾಗಿದೆ,
ರಾಯಲ್ ಎನ್ ಫೀಲ್ಡ್ ಬೈಕ್ ಬ್ರ್ಯಾಂಡ್ ಗೆ ಟ್ವಿಸ್ಟ್ ನೀಡಿ ರಾಯಲ್ ಇನ್ ಫೀಲ್ಡ್ ಎಂದು ಹೆಸರಿಡಲಾಗಿದೆ, ಈ ಸಿನಿಮಾ ಬಗ್ಗೆ ಅಧಿಕೃತ ಪ್ರಕಟಣೆ ಮಾತ್ರ ಹೊರಬೀಳಬೇಕಿದೆ, ಜುಲೈ ತಿಂಗಳಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ,
ಸದ್ಯ ಎಪಿ ಅರ್ಜುನ್ ಕಿಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಜೊತೆಗೆ ರಾಯಲ್ ಇನ್ ಫೀಲ್ಡ್ ಗಾಗಿ ಚಿತ್ರಕಥೆ ಸಿದ್ದ ಪಡಿಸುತ್ತಿದ್ದಾರೆ, ಶಿವಣ್ಣನ ಪಾತ್ರದ ಬಗ್ಗೆ ಚಿತ್ರ ತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ,
ಚಿತ್ರದಲ್ಲಿ ಶಿವಣ್ಣ ಮೂರು ವಿಶೇಷ ಗೆಟಪ್ ನಲ್ಲಿ ಕಾಣಸಿಕೊಳ್ಳಲಿದ್ದಾರೆ, ಅಂದರೆ ಮೂರು ವಿಭಿನ್ನ ವಯೋಮಾನದ ಪಾತ್ರ ಇದಾಗಿದೆ, 35,50 ಮತ್ತು 70ರ ವಯಸ್ಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೊಂದು ಆ್ಯಕ್ಷನ್ ಸಿನಿಮಾವಾಗಿದ್ದು, ಓಮ್ ಸಿನಿಮಾದಂತ ಕಥೆ ತರಲು ನಿರ್ದೇಶಕರು ತಯಾರಿಗಿದ್ದಾರೆ, ಪ್ರೀತಿ, ರೌಡಿಸಂ ಹಾಗೂ ಭಾವನೆಗಳು ಪ್ರಮುಖ ಕಥಾವಸ್ತುವಾಗಿದೆ,