ಕಿರುತೆರೆ ನಟನೊಂದಿಗೆ ಕುಲವಧು 'ಧನ್ಯಾ' ಖ್ಯಾತಿಯ ದೀಪಿಕಾ ನಿಶ್ಚಿತಾರ್ಥ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರದಲ್ಲಿ ನಟಿಸುತ್ತಿರುವ ದೀಪಿಕಾ ತಮ್ಮ ಪ್ರಿಯಕರನೊಂದಿಗೆ ನಿಶ್ಚಿತಾರ್ಥ ...
ದೀಪಿಕಾ
ದೀಪಿಕಾ
Updated on
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರದಲ್ಲಿ ನಟಿಸುತ್ತಿರುವ ದೀಪಿಕಾ ತಮ್ಮ ಪ್ರಿಯಕರನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
ದೀಪಿಕಾ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕು ಆಕರ್ಶ್ ಅವರನ್ನು ಬಹಳ ದಿನದಿಂದಲೂ ಪ್ರೀತಿ ಮಾಡುತ್ತಿದ್ದರು. ಈಗ ಅವರು ಅಕ್ಕು ಆಕರ್ಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕೆಲದಿನಗಳ ಹಿಂದೆ ಅಭಿಮಾನಿಗಳಿಗೆ ಮದುವೆ ಸುಳಿವು ನೀಡಿದ್ದರು. ಭಾವೀ ಪತಿಯನ್ನೂ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಕಿರುತೆರೆ ನಟ ಆಕರ್ಷ್ ಜೊತೆ ಧನ್ಯಾ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. 
ನಿಶ್ಚಿತಾರ್ಥಕ್ಕೆ ಕುಟುಂಬದವರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕಿರುತೆರೆ ಕೆಲವು ನಟ-ನಟಿಯರು ಭಾಗಿಯಾಗಿ ನವ ಜೋಡಿಗೆ  ಶುಭ ಹಾರೈಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com