ಎಲ್ಲರನ್ನು ಸೆಳೆಯುತ್ತಿದೆ 'ಕವಲುದಾರಿ' ಸಿನಿಮಾದ 'ಇದೇ ದಿನ' ಹಾಡು!

ಹೇಮಂತ್‌ ರಾವ್‌ ನಿರ್ದೇಶನದ ಕವಲು ದಾರಿ ಚಿತ್ರವು ನಿಗೂಢ, ನಿಗೂಢ ಹಾಡು ಈಗಾಗಲೇ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಮತ್ತೊಂದು ಹಾಡು ಬಿಡುಗಡೆಯಾಗಿ ಜನರನ್ನು ...
ಅನಂತ್ ನಾಗ್
ಅನಂತ್ ನಾಗ್
ಹೇಮಂತ್‌ ರಾವ್‌ ನಿರ್ದೇಶನದ ಕವಲು ದಾರಿ ಚಿತ್ರವು ನಿಗೂಢ, ನಿಗೂಢ ಹಾಡು ಈಗಾಗಲೇ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಮತ್ತೊಂದು ಹಾಡು ಬಿಡುಗಡೆಯಾಗಿ ಜನರನ್ನು ಸೆಳೆಯುತ್ತಿದೆ. 
'ನಿಗೂಢ ನಿಗೂಢ ಹಾಡು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಹಿಟ್‌ ಆಗಿದೆ. ಹಾಗಾಗಿ ಎರಡನೇ ಹಾಡನ್ನು ವಿಡಿಯೋ ಮೂಲಕ ಬಿಡುಗಡೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಯೋಚಿಸಿ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಇದೇ ದಿನ ಎಂದು ಆರಂಭವಾಗುವ ಹಾಡನ್ನು ಸಿದ್ದಾರ್ಥ್  ಹಾಡಿದ್ದಾರೆ.
'ಇದೇ ದಿನ ಹಾಡು ಮೆಲೋಡಿಯಾಗಿರುವುದರ ಜತೆಗೆ ವಿಶೇಷವಾಗಿ ಕೇಳುತ್ತದೆ. ಇಡೀ ಹಾಡು ಅನಂತನಾಗ್‌ ಅವರು ರಿಷಿ ಮೇಲೆ ಪಿಕ್ಚರೈಸ್‌ ಆಗಿದೆ. ಈಗ ಬಿಡುಗಡೆಯಾಗಿರುವ ವಿಡಿಯೋ ರೀತಿಯಲ್ಲಿ ಸಿನಿಮಾದಲ್ಲಿ ಇರುವುದಿಲ್ಲ. ಸಿನಿಮಾದ ಕೆಲ ತುಣುಕುಗಳನ್ನು ಇಟ್ಟುಕೊಂಡು ಪ್ರಚಾರಕ್ಕಾಗಿ ಈ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಮಂಕ್ ಹೇಳಿದ್ದಾರೆ. 
ಪುನೀತ್ ರಾಜ್ ಕುಮಾರ್  ಅವರ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ ಮೊದಲ ಸಿನಿಮಾವಾಗಿದೆ, ಏಪ್ರಿಲ್ 12 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com