'ಬೆಲ್ ಬಾಟಮ್' ಚಿತ್ರದ ಯಶಸ್ಸು; ಭಾಗ-2 ತಯಾರಿಗೆ ಚಿತ್ರತಂಡ ಸಜ್ಜು

ಬೆಲ್ ಬಾಟಮ್ ಚಿತ್ರ ಯಶಸ್ವಿಯಾಗಿ ಚಿತ್ರತಂಡ ಖುಷಿಯಾಗಿದೆ. ಇದೇ ಯಶಸ್ಸಿನ ಖುಷಿಯಲ್ಲಿ ಬೆಲ್ ಬಾಟಮ್ ....
ಬೆಲ್ ಬಾಟಮ್ ಚಿತ್ರದಲ್ಲಿ ರಿಷಬ್ ಶೆಟ್ಟಿ
ಬೆಲ್ ಬಾಟಮ್ ಚಿತ್ರದಲ್ಲಿ ರಿಷಬ್ ಶೆಟ್ಟಿ
Updated on
ಬೆಲ್ ಬಾಟಮ್ ಚಿತ್ರ ಯಶಸ್ವಿಯಾಗಿ ಚಿತ್ರತಂಡ ಖುಷಿಯಾಗಿದೆ. ಇದೇ ಯಶಸ್ಸಿನ ಖುಷಿಯಲ್ಲಿ ಬೆಲ್ ಬಾಟಮ್ ಭಾಗ 2 ಕೂಡ ತಯಾರಾಗಲಿದೆ. ಡಿಟೆಕ್ಟಿವ್ ದಿವಾಕರ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ, ಕುಸುಮಾ ಪಾತ್ರದಲ್ಲಿನ ಹರಿಪ್ರಿಯಾ, ಬರಹಗಾರ ಟಿ ಕೆ ದಯಾನಂದ್, ನಿರ್ದೇಶಕ ಜಯತೀರ್ಥ ಮತ್ತು ನಿರ್ಮಾಪಕ ಸಂತೋಷ್ ಕುಮಾರ್ ಅವರು ಮತ್ತೊಮ್ಮೆ ಒಂದಾಗುತ್ತಿದ್ದಾರೆ.
ಬೆಲ್ ಬಾಟಮ್ ಯಶಸ್ವಿ 50 ದಿನದ ಪ್ರದರ್ಶನಕ್ಕೆ ಕಾಲಿಡುತ್ತಿದೆ. ಚಿತ್ರದ ಮೊದಲ ಭಾಗ ತಯಾರಾಗುತ್ತಿದ್ದ ಸಂದರ್ಭದಲ್ಲಿ ಮುಂದುವರಿದ ಭಾಗದ ಕಥೆ ಕೇಳಿದ್ದರಂತೆ ರಿಷಬ್ ಶೆಟ್ಟಿ, ಇದೀಗ ಮೊದಲ ಭಾಗ ಯಶಸ್ವಿಯಾದ್ದರಿಂದ ಮುಂದುವರಿದ ಭಾಗ ತಯಾರಿಸಲು ಚಿತ್ರತಂಡ ಉತ್ಸುಕವಾಗಿದೆ. ಚಿತ್ರತಂಡ ರಿಷಬ್ ಅವರ ಲಭ್ಯತೆಗೆ ಕಾಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com