ದರ್ಶನ್ ಅಭಿನಯದ ಯಜಮಾನ ಚಿತ್ರ ಯಶಸ್ಸಿನತ್ತ ಸಾಗುತ್ತಿದ್ದು ಮೂರನೇ ವಾರಕ್ಕೆ ಕಾಲಿಟ್ಟಿದೆ. ವಿ ಹರಿಕೃಷ್ಣ ನಿರ್ದೇಶನದ ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣದಲ್ಲಿ ಮೂಡಿಬಂದಿರುವ ಯಜಮಾನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ,
ಈ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಎಂ ಡಿ ಶ್ರೀಧರ್ ನಿರ್ದೇಶನದ ಒಡೆಯ ಚಿತ್ರದ ಪ್ರಮುಖ ಭಾಗದ ಶೂಟಿಂಗ್ ಮೈಸೂರಿನಲ್ಲಿ ನಡೆಯಿತು. ಎರಡನೇ ಶೆಡ್ಯೂಲ್ ಇದೇ ವಾರ ಹೈದರಾಬಾದ್ ನಲ್ಲಿ ಆರಂಭವಾಗಲಿದೆ,