'ಸಲಗ' ಸಿನಿಮಾಗಾಗಿ ಒಂದಾದ ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ್!

ದುನಿಯಾ ವಿಜಯ್ ಮತ್ತು ಡಾಲಿ ಅಲಿಯಾಸ್ ಧನಂಜಯ್ ಸಲಗ ಎಂಬ ಸಿನಿಮಾಗಾಗಿ ಒಂದಾಗುತ್ತಿದ್ದಾರೆ ...
ದುನಿಯಾ ವಿಜಯ್ ಮತ್ತು ಧನಂಜಯ್
ದುನಿಯಾ ವಿಜಯ್ ಮತ್ತು ಧನಂಜಯ್
ದುನಿಯಾ ವಿಜಯ್ ಮತ್ತು ಡಾಲಿ ಅಲಿಯಾಸ್ ಧನಂಜಯ್ ಸಲಗ ಎಂಬ ಸಿನಿಮಾಗಾಗಿ ಒಂದಾಗುತ್ತಿದ್ದಾರೆ 
ಟಗರು ನಿರ್ದೇಶಕ ಸೂರಿ ಬಿಟ್ಟು  ಆ ಸಿನಿಮಾಗಾಗಿ  ಕೆಲಸ ಮಾಡಿದ ಎಲ್ಲ ತಂತ್ರಜ್ಞರು ಮತ್ತು ಕಲಾವಿದರು ಸೇರಿಕೊಂಡು ದುನಿಯಾ ವಿಜಯ್‌ ನಟನೆಯ ಸಲಗ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. 
ಕೆಲ ದಿನಗಳ ಹಿಂದೆ ವಿಜಿ ನಟನೆಯ ಸಲಗ ಸಿನಿಮಾ ಸೆಟ್ಟೇರುತ್ತದೆ ಎಂಬ ಸುದ್ದಿ ಹಬ್ಬಿತ್ತು. ಈ ಸಿನಿಮಾದ ತಂತ್ರಜ್ಞರು ಮತ್ತಿತರ ವಿವರಗಳು ಬಹಿರಂಗವಾಗಿದೆ. ಟಗರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಮಾಸ್ತಿ, ಕೋ ಡೈರೆಕ್ಟರ್‌ ಆಗಿದ್ದ ಅಭಿ, ಆರ್ಟ್‌ ಡಿಪಾರ್ಟ್‌ಮೆಂಟ್‌ನಲ್ಲಿದ್ದ ಮಲ್ಲ, ಸಂಗೀತ ನಿರ್ದೇಶಕ ಚರಣ್‌ರಾಜ್‌ ಸೇರಿ ಎಲ್ಲರೂ ಸಲಗಕ್ಕೆ ಒಂದಾಗಿದ್ದಾರೆ. ಇವರೆಲ್ಲರ ಜತೆ ಟಗರಿಗೆ ಬಂಡವಾಳ ಹೂಡಿದ್ದ ಕೆ.ಪಿ. ಶ್ರೀಕಾಂತ್‌ ಅವರೇ ಈ ಸಿನಿಮಾಗೂ ಹಣ ಹಾಕುತ್ತಿದ್ದಾರೆ. 
'ಸಲಗ ಸಿನಿಮಾದ ಕಥೆ ಬಹಳ ಚೆನ್ನಾಗಿದ್ದು, ನನ್ನ ಟಗರು ತಂಡ ಇಲ್ಲಿ ಕಂಪ್ಲೀಟ್‌ ಒಂದಾಗಿದೆ. ಮಾಸ್ತಿ, ಅಭಿ, ಮಲ್ಲ, ಇವರ ಜತೆ ಇನ್ನೂ ಒಂದಷ್ಟು ಜನ ನಮ್ಮ ಜತೆಗಿದ್ದಾರೆ. ಈ ಸಿನಿಮಾವೂ ಸಹ ಟಗರಿನಂತೆ ದೊಡ್ಡ ಮಟ್ಟದಲ್ಲಿ ಹಿಟ್‌ ಆಗುವುದರಲ್ಲಿ ಅನುಮಾನವಿಲ್ಲ. ನಿರ್ದೇಶಕರಾರ‍ಯರು ಎಂಬುದನ್ನು ಸದ್ಯದಲ್ಲೇ ಹೇಳುತ್ತೇವೆ' ಎನ್ನುತ್ತಾರೆ ಶ್ರೀಕಾಂತ್‌. 
ಇನ್ನು ಟಗರಿನಲ್ಲಿ ಅಬ್ಬರಿಸಿದ್ದ ಡಾಲಿ ಧನಂಜಯ, ಕಾಕ್ರೋಚ್‌ ಪಾತ್ರಧಾರಿ ಸುಧಿ ಸಹ ಸಲಗದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com