ಚಿತ್ರೀಕರಣ ಮುಗಿಸಿದ '100': ಖಾಕಿ ಖದರ್‌ನಲ್ಲಿ ರಮೇಶ್ ಅರವಿಂದ್

ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ನಿರ್ದೇಶನದ ಸೈಬರ್ ಕ್ರೈಮ್ ಆಧಾರಿತ ಕೌಟುಂಬಿಕ ಥ್ರಿಲ್ಲರ್ ಚಿತ್ರ '100'  ಚಿತ್ರೀಕರಣ ಪೂರ್ಣಗೊಂಡಿದ್ದು,  ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ.
ರಮೇಶ್ ಅರವಿಂದ್-ರಚಿತಾ ರಾಂ
ರಮೇಶ್ ಅರವಿಂದ್-ರಚಿತಾ ರಾಂ
Updated on

ಬೆಂಗಳೂರು: ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ನಿರ್ದೇಶನದ ಸೈಬರ್ ಕ್ರೈಮ್ ಆಧಾರಿತ ಕೌಟುಂಬಿಕ ಥ್ರಿಲ್ಲರ್ ಚಿತ್ರ '100' ಚಿತ್ರೀಕರಣ ಪೂರ್ಣಗೊಂಡಿದ್ದು,  ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ.

ರಮೇಶ್ ಅರವಿಂದ್, ಪೂರ್ಣ, ರಚಿತ ರಾಮ್ ಮತ್ತಿತರರ 'ವಿಶ್ ಯು ಎ ಹ್ಯಾಪಿ ಬರ್ತ್ ಡೇ’ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಳಿಸಿದೆ ಇನ್ನೊಂದು ತಿಂಗಳಲ್ಲಿ ರಿ ರೆಕಾರ್ಡಿಂಗ್ ಕೆಲಸವೂ ಮುಗಿಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದ ಬಗ್ಗೆ ವಿರಿಸಿದ ರಮೇಶ್ ಅರವಿಂದ್, ೧೦೦ ಸೈಬರ್ ಕ್ರೈಮ್ ಆಧಾರಿತ ಕಥೆಯಾಗಿದೆ  ಬೆಂಕಿ, ಚಾಕು, ಅಧಿಕಾರ, ಸಾಮಾಜಿಕ ಜಾಲತಾಣವನ್ನು ಯಾರು ಉಪಯೋಗಿಸುತ್ತಾರೆ ಎಂಬುದರ ಮೇಲೆ ಅದರ ಬಳಕೆ, ದುರ್ಬಳಕೆ ಗಳಿರುತ್ತವೆ. ಅಂತೆಯೆ '೧೦೦' ಸಿನಿಮಾದಲ್ಲಿ ಸಾಮಾಜಿಕ ಜಾಲತಾಣದ ದುರ್ಬಳಕೆಯ ಮೇಲೆ. ಅದರಿಂದಾಗುವ ಅನಾಹುತ ಬೆಳಕು ಚೆಲ್ಲಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com