ಮಗಳ ವಿಡಿಯೋ ಹಾಕಿ,ಮತ್ತೆ ಕನ್ನಡಿಗ ಅಭಿಮಾನಿಗಳ ಕಣ್ಣು ಕೆಂಪಾಗಿಸಿದ ರಾಧಿಕಾ ಪಂಡಿತ್!

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ತಮ್ಮ ಮುದ್ದು ಪುತ್ರಿಯ ತುಂಟಾಟಗಳನ್ನು ಹಂಚಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್  ಪತ್ನಿ ರಾಧಿಕಾ ಪಂಡಿತ್ ,ಇತ್ತೀಚಿಗೆ ಐರಾಳ ವಿಡಿಯೋವೊಂದನ್ನು ಹಾಕಿ ,ಮತ್ತೆ ಕನ್ನಡಿಗರ ಕಣ್ಣು ಕೆಂಪಾಗಿಸಿದ್ದಾರೆ.
ಯಶ್, ರಾಧಿಕಾ, ಐರಾ
ಯಶ್, ರಾಧಿಕಾ, ಐರಾ
Updated on: 

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ತಮ್ಮ ಮುದ್ದು ಪುತ್ರಿಯ ತುಂಟಾಟಗಳನ್ನು ಹಂಚಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್  ಪತ್ನಿ ರಾಧಿಕಾ ಪಂಡಿತ್ ,ಇತ್ತೀಚಿಗೆ ಐರಾಳ ವಿಡಿಯೋವೊಂದನ್ನು ಹಾಕಿ ,ಮತ್ತೆ ಕನ್ನಡಿಗರ ಕಣ್ಣು ಕೆಂಪಾಗಿಸಿದ್ದಾರೆ.

ರಾಧಿಕಾ ಪಂಡಿತ್  ಶೇರ್ ಮಾಡಿರುವ ವಿಡಿಯೋದಲ್ಲಿ, ಪೋಟೋ ಪ್ರೇಮ್ ನಲ್ಲಿರುವ ತನ್ನ ತಂದೆ  ಹಾಗೂ ತಾಯಿ ಯನ್ನು ಐರಾ ಗುರುತಿಸುತ್ತದೆ. ರಾಧಿಕಾ ಐರಾ ಜೊತೆಗೆ ಕೊಂಕಣಿ ಭಾಷೆಯಲ್ಲಿ ಮಾತನಾಡುವುದು ಕಂಡುಬಂದಿದೆ. ಕನ್ನಡ ಬದಲಿಗೆ ಕೊಂಕಣಿಯಲ್ಲಿ ರಾಧಿಕಾ ಐರಾಳಿಗೆ ಹೇಳುತ್ತಿರುವುದಕ್ಕೆ ಕನ್ನಡಿಗ ಅಭಿಮಾನಿಗಳು  ಗರಂ ಆಗಿದ್ದಾರೆ. 

ಮಗಳಿಗೆ ಕೊಂಕಣಿ ಭಾಷೆಯನ್ನು ಕಲಿಸುತ್ತಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳಿಗೆ ಕನ್ನಡ ಕಲಿಸಿ ಕೊಂಕಣಿ ಅಲ್ಲ ಎಂದು ಮತ್ತೆ ಕೆಲವರು ರಾಧಿಕಾ ಪಂಡಿತ್ ಅವರಿಗೆ ಪಾಠ ಮಾಡಿದ್ದಾರೆ

ಟ್ರೋಲ್ ಗೆ ಗುರಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ರಾಧಿಕಾ ಪಂಡಿತ್,  ಐರಾ ತಂದೆಯ ಮಾತೃ ಭಾಷೆ ಕನ್ನಡ ಹಾಗೂ ತಾಯಿಯ ಮಾತೃ ಭಾಷೆ ಕೊಂಕಣಿ ಎರಡರಲ್ಲೂ ಸುಂದರವಾಗಿ ಪ್ರತಿಕ್ರಿಯಿಸುತ್ತಾಳೆ ಎಂದು ಹೇಳಿದ್ದಾರೆ. 

ರಾಧಿಕಾ ಹಾಗೂ ಯಶ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಜೂನ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com