ಅಭಿಷೇಕ್ 2ನೇ ಚಿತ್ರಕ್ಕೆ ಗುರುದತ್ತ ಗಾಣಿಗ ನಿರ್ದೇಶನ

ಅಮರ್ ಚಿತ್ರದ ನಂತರ ಅಭಿಷೇಕ್ ಮುಂದಿನ ಸಿನಿಮಾ ಯಾರು ನಿರ್ದೇಶಿಸಲಿದ್ದಾರೆ ಎಂಬುದರ  ಬಗ್ಗೆ ಹಲವು ಮಾತುಗಳು ಕೇಳಿ ಬರುತ್ತಿವೆ.
ಅಭಿಷೇಕ್
ಅಭಿಷೇಕ್
Updated on

ಅಮರ್ ಚಿತ್ರದ ನಂತರ ಅಭಿಷೇಕ್ ಮುಂದಿನ ಸಿನಿಮಾ ಯಾರು ನಿರ್ದೇಶಿಸಲಿದ್ದಾರೆ ಎಂಬುದರ  ಬಗ್ಗೆ ಹಲವು ಮಾತುಗಳು ಕೇಳಿ ಬರುತ್ತಿವೆ.

ಅಮರ್' ಸಿನಿಮಾದ ಬಳಿಕ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡದ ಅಭಿಷೇಕ್ ಈಗ ಸರ್ಪ್ರೈಸ್ ಎಂಬಂತೆ ಸ್ಟೈಲಿಶ್ ಫೋಟೋವೊಂದನ್ನ ಶೇರ್ ಮಾಡಿದ್ದರು.

ಸ್ವಾತಂತ್ರ್ಯ ಹೋರಾಟಗಾರರಂತೆ ಮೀಸೆ ಹಾಗೂ ಗಡ್ಡ ಬಿಟ್ಟಿರುವ ಲುಕ್ ನಲ್ಲಿ ಅಭಿಷೇಕ್ ಕಾಣಿಸಿಕೊಂಡಿದ್ದು, ಈ ಲುಕ್ ಬಗ್ಗೆ ಈಗ ಭಾರಿ ಚರ್ಚೆಯಾಗ್ತಿದೆ. ಇನ್ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡ ಕೆಲವೇ ಗಂಟೆಯಲ್ಲಿ ನಿಖಿಲ್ ಕುಮಾರ್ ಈ ಕಾಮೆಂಟ್ ಮಾಡಿದ್ದಾರೆ.

ಅಭಿಷೇಕ್ ಅಂಬರೀಶ್ ಅವರ ಹೊಸ ಲುಕ್ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರ್ ''Looking Sharp....ನಿನ್ನ ಮುಂದಿನ ಚಿತ್ರಕ್ಕೆ ಶುಭಾಶಯ'' ಎಂದು ವಿಶ್ ಮಾಡಿದ್ದರು.

ಮೂಲಗಳ ಪ್ರಕಾರ ಅಭಿಷೇಕ್ ಮುಂದಿನ ಸಿನಿಮಾವನ್ನು ಪ್ರಶಾಂತ್ ರಾಜ್ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಲೇ ಅಭಿಗಾಗಿ ಕಥೆ ಸಿದ್ಧವಾಗಿದೆ, ಹಲವು ಸುತ್ತಿನ ಮಾತುಕತೆಗಳು ನಡೆದಿವೆ, ಈ ಸಿನಿಮಾದಲ್ಲಿ ಅಭಿಯ ಹೊಸ ಅವತಾರ ರಿವೀಲ್ ಆಗಲಿದೆ. 

ಅಭಿಷೇಕ್‌ ಅಂಬರೀಷ್‌ ಅವರ 3ನೇ ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ.  ಅಮರ್‌ ಸಿನಿಮಾದ ಅಭಿಷೇಕ್‌ ಕೆಲ ಕಥೆಗಳನ್ನು ಕೇಳಿದ್ದರು. ಆದರೆ ಎರಡನೇ ಚಿತ್ರವನ್ನು ಮಹೇಶ್‌ರಾವ್‌ ನಿರ್ದೇಶನ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಜತೆಗೆ ಅಭಿಷೇಕ್‌ ಕೂಡ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರ ಮೂರನೇ ಚಿತ್ರದ ಸುದ್ದಿ ಹೊರಬಿದ್ದಿದ್ದು, ಅದನ್ನು ಅಂಬಿ ನಿಂಗೆ ವಯಸ್ಸಾಯ್ತೋ ಖ್ಯಾತಿಯ ಗುರುದತ್‌ ಗಾಣಿಗ ನಿರ್ದೇಶಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com