ಕಿರಿಕ್ ಪಾರ್ಟಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಅಭಿನಯದ ಮುಹೂರ್ತ ನೆರವೇರಿದೆ.
ಸ್ಯಾಂಡಲ್ವುಡ್ನಲ್ಲಿ ಕ್ರೀಡಾ ಪ್ರಧಾನ ಚಿತ್ರಗಳ ಹೊಸ ಪರ್ವವೊಂದು ಆರಂಭವಾಗುತ್ತಿದೆ. ಒಂದೆಡೆ ಅಖಾಡಕ್ಕಿಳಿದ 'ಪೈಲ್ವಾನ್'ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮತ್ತೊಂದೆಡೆ ದುನಿಯಾ ವಿಜಿ ಅಭಿನಯದ 'ಕುಸ್ತಿ' ಕಮಾಲ್ ಮಾಡಲು ಅಣಿಯಾಗುತ್ತಿದೆ. .
'ಕಿರಿಕ್ ಪಾರ್ಟಿ' ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಕಾಣಿಸಿಕೊಳ್ಳುತ್ತಿರುವುದು ಹಳೆಯ ಸುದ್ದಿ. ಇದೀಗ ಆ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಕರಮ್ ಚಾವ್ಲಾ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಅಣ್ಣಾವ್ರ ಮೊಮ್ಮಗ ಬಾಕ್ಸರ್ ಪಾತ್ರದಲ್ಲಿ ರಿಂಗ್ಗೆ ಎಂಟ್ರಿ ಕೊಡಲಿದ್ದಾರೆ.
ಈಗಾಗಲೇ 'ಪೈಲ್ವಾನ್' ರಿಂಗ್ನಲ್ಲೂ ಬಾಕ್ಸಾಫೀಸ್ನಲ್ಲೂ ಅಬ್ಬರಿಸಿದ್ದಾನೆ. ಇದರ ಬೆನ್ನಲ್ಲೇ ಮತ್ತೊಂದು ಬಾಕ್ಸಿಂಗ್ ಕಥೆಯಾಧಾರಿತ ಚಿತ್ರದ ಶೂಟಿಂಗ್ ಆರಂಭವಾಗಿದೆ. ಇನ್ನೂ ಹೆಸರಿಡದ ಈ ಚಿತ್ರದ ಕಥೆಯನ್ನು ಬಾಕ್ಸಿಂಗ್ ಸುತ್ತ ಹೆಣೆಯಲಾಗಿದ್ದು, ಚಿತ್ರದ ಶೇ. 70 ರಿಂದ 80 ಸನ್ನಿವೇಶಗಳು ಬಾಕ್ಸಿಂಗ್ಗೆ ಸಂಬಂಧಿಸಿರಲಿದೆ ಎಂದು ತಿಳಿದು ಬಂದಿದೆ.
ಹಾಗೆಯೇ ರಿಂಗ್ ಒಳಗಿನ ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿರುವ ಈ ಚಿತ್ರಕ್ಕೆ 'ಟೆನ್' ಎಂಬ ಶೀರ್ಷಿಕೆ ಫೈನಲ್ ಮಾಡುವ ಸಾಧ್ಯತೆಯಿದೆ ಎಂಬ ಮಾತುಗಳು ಹರಿದಾಡುತ್ತಿದೆ.
ಏಕೆಂದರೆ ಬಾಕ್ಸಿಂಗ್ ರಿಂಗ್ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ ರೆಫ್ರಿ 10 ರವರೆಗೂ ಕೌಂಟ್ ಮಾಡುತ್ತಾರೆ. ಚಿತ್ರದ ರೋಚಕ ದೃಶ್ಯ ಇದೇ ಆಗಿರುವುದರಿಂದ ಚಿತ್ರಕ್ಕೆ ‘ಟೆನ್’ ಶೀರ್ಷಿಕೆ ಸೂಕ್ತ ಎಂಬ ಅಭಿಪ್ರಾಯ ಚಿತ್ರತಂಡದಲ್ಲಿದೆ.
ಇನ್ನು ಈ ಚಿತ್ರಕ್ಕಾಗಿ ವಿನಯ್ ರಾಜ್ಕುಮಾರ್ ಕಳೆದ ಐದು ತಿಂಗಳಿಂದ ದೇಹ ದಂಡಿಸುತ್ತಿದ್ದು, ಸಂಪೂರ್ಣ ಹೊಸ ಗೆಟಪ್ ಮೂಲಕ ತೆರೆ ಮೇಲೆ ಕಾಣಿಸಲಿದ್ದಾರೆ.
Advertisement