ಕೆಜಿಎಫ್-2ಗೆ ವಿಲನ್ ಆದ 'ತಂಗಂ', ಚಿತ್ರೀಕರಣ ಸ್ಥಗಿತಗೊಳಿಸುವಂತೆ ದೂರು!

ತೀವ್ರ ಕುತೂಹಲ ಕೆರಳಿಸಿರುವ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಮತ್ತೆ ಅಡ್ಡಿ ಎದುರಾಗಿದ್ದು, ಇದೀಗ ಚಿತ್ರದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ರಾಕಿ ಭಾಯ್ ಪಾತ್ರ ರೌಡಿ ತಂಗಂನದ್ದು ಎಂದ ತಾಯಿ, ಚಿತ್ರೀಕರಣ ನಿಲ್ಲಿಸುವಂತೆ ಕುಟುಂಬಸ್ಥರಿಂದ ದೂರು

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಮತ್ತೆ ಅಡ್ಡಿ ಎದುರಾಗಿದ್ದು, ಇದೀಗ ಚಿತ್ರದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ ಎನ್ನಲಾಗಿದೆ.

ಮಾಧ್ಯಮವೊಂದು ವರದಿ ಮಾಡಿರುವಂತೆ ಈ ಸಿನಿಮಾದ ಕಥೆ ನಟೋರಿಯಸ್ ರೌಡಿ ತಂಗಂ ಕಥೆ ಹೋಲುತ್ತಿದೆ ಎಂದು ದೂರು ದಾಖಲಾಗಿದೆ. ಚಿತ್ರದಲ್ಲಿ ಬರುವ ಯಶ್ ಪಾತ್ರ ತಮ್ಮ ಮಗನ ನಿಜ ಜೀವನದ ಪಾತ್ರ ಹೋಲುತ್ತದೆ ಎಂದು ತಂಗಂ ತಾಯಿ ಪೌಳಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಕುಟುಂಬದ ಅನುಮತಿ ಇಲ್ಲದೇ ಕೆಜಿಎಫ್‌ ಚಾಪ್ಟರ್‌ 1ರಲ್ಲಿ  ನನ್ನ ಮಗನ ನಿಜ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂಬುದು ತಂಗಂ ತಾಯಿ ಪೌಳಿ ಆರೋಪವಾಗಿದ್ದ, ಇದೇ ಕಾರಣಕ್ಕೆ 'ಕೆಜಿಎಫ್‌ ಚಾಪ್ಟರ್‌ 2’ಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಅಕ್ಟೋಬರ್‌ 9ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಕೋರ್ಟ್‌ ಸಮನ್ಸ್ ನೀಡಿದೆ. ಈ ದೂರಿನಿಂದ ಚಿತ್ರಕ್ಕೆ ದೊಡ್ಡ ಕಂಟಕ ಉಂಟಾಗುವ ಸಾಧ್ಯತೆ ಇದೆ.

ಇನ್ನು ಈ ಹಿಂದೆ ಪರಿಸರ ನಾಶ ಮತ್ತು ಕೆಜಿಎಪ್ ಹೆಸರಿನ ಇತಿಹಾಸಕ್ಕೆ ಚಿತ್ರತಂಡ ಧಕ್ಕೆ ತರುತ್ತಿದೆ ಎಂದು ಶ್ರೀನಿವಾಸ್ ಎನ್ನುವರು ದೂರು ನೀಡಿ ಚಿತ್ರೀಕರಣಕ್ಕೆ ತಡೆಯಾಜ್ಞೆ ತಂದಿದ್ದರು. ಕೆಜಿಎಫ್ ಚಿತ್ರತಂಡ ಕೋಲಾರದ ಕೆನಡೀಸ್​ ಸೈನೈಡ್​ ಗುಡ್ಡದಲ್ಲಿ ಚಿತ್ರೀಕರಣ ನಡೆಸದಂತೆ ಜೆಎಂಎಫ್​ಸಿ ನ್ಯಾಯಾಲಯ ತಡೆ ನೀಡಿತ್ತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ರದ್ದುಗೊಳಿಸಿತ್ತು.  ಇದರ ಬೆನ್ನಲ್ಲೇ ಚಿತ್ರಕ್ಕೆ ಮತ್ತೊಂದು ಅಡ್ಡಿ ಎದುರಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com