ಒಂದು ವರ್ಷದ ಸಂಭ್ರಮದಲ್ಲಿ ಯಶ್-ರಾಧಿಕಾ ಪುತ್ರಿ 'ಐರಾ'

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ದಂಪತಿ ಪುತ್ರಿ ಐರಾ ಇಂದು ತಮ್ಮ ಮೊದಲ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

Published: 02nd December 2019 02:09 PM  |   Last Updated: 02nd December 2019 02:10 PM   |  A+A-


AYRA Celebrates her first Birthday

ಐರಾ ಮತ್ತು ಯಶ್ ರಾಧಿಕಾ ಪಂಡಿತ್

Posted By : Srinivasamurthy VN
Source : Online Desk

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ದಂಪತಿ ಪುತ್ರಿ ಐರಾ ಇಂದು ತಮ್ಮ ಮೊದಲ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಯಶ್​​ ಮತ್ತು ರಾಧಿಕಾ ದಂಪತಿ ಭಾರೀ ಸಂಭ್ರಮದಿಂದ ಪುತ್ರಿಯ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಆಯ್ರಾಳ ಹುಟ್ಟುಹಬ್ಬದ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಮತ್ತು ಯಶ್​​ ಕುಟುಂಬದ ಆಪ್ತರು ಭಾಗಿಯಾಗಲಿದ್ದಾರೆ.

ಇನ್ನು ಐರಾ ಹುಟ್ಟುಹಬ್ಬದ ನಿಮಿತ್ತ ತಾಯಿ ರಾಧಿಕಾ ಅವರು ಸಾಮಾಜಿಕ ಜಾಲತಾಣಕ್ಕೆ ಫೋಟೋವೊಂದನ್ನು ಅಪ್ಲೋಡ್ ಮಾಡಿ ಜನ್ಮ ದಿನ ಶುಭಕೋರಿದ್ದು, ಈ ಪೋಸ್ಟ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಮಗಳ ಬಗ್ಗೆ ಭಾವನಾತ್ಮಕವಾಗಿ ಸಂದೇಶ ಬರೆದುಕೊಂಡಿದ್ದಾರೆ. ‘ನನ್ನ ಹೃದಯದ ಭಾಗವಾಗಿರುವಾಗ, ನನ್ನ ಆತ್ಮದ ಭಾಗವಾಗಿರುವ ನಿನಗೆ ಹುಟ್ಟು ಹಬ್ಬದ ಶುಭಾಷಯಗಳು’ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಅಲ್ಲದೆ ಅಭಿಮಾನಿಗಳು ಐರಾ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಇತ್ತೀಚೆಗಷ್ಟೇ ಐರಾ, ಬಿಸಿಲಿನಲ್ಲಿ ಹೇಗೆ ನೋಡುವುದು ಎಂಬುದನ್ನು ಎಕ್ಸ್ ಪ್ರೆಶನ್ ಮೂಲಕ ತೋರಿಸಿದ್ದು, ಆಕೆಯ ವಿಡಿಯೋಗೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp