

ಬೆಂಗಳೂರು: ಕೊಲ್ಲೊ ದೇವರಿಗಿಂತ ಕಾಯೋ ದೇವರು ದೊಡ್ಡೊನು” ಕಾಯುವ ದೇವರಿಗೆ ಸಮರಾದ ನಮ್ಮನ್ನು ಕಾಪಾಡುವ ಡಾಕ್ಟರ್ಸ್ ಮೇಲೆ ಹಲ್ಲೆ ಮಾಡುವಷ್ಟು ನೀಚರಾಗಿ ಹೋದರೆ ನಮ್ಮ ಜನ ? ಎಂದು ನಟ ಉಪೇಂದ್ರ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಪರೀಕ್ಷಿಸಲು ತೆರಳಿದ್ದ ವೈದ್ಯರು, ನರ್ಸ್ ಗಳು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಟ ಉಪೇಂದ್ರ ಬೇಸರ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.