'ಲಾಕ್‌ಡೌನ್': ಇದು ಗುರುಪ್ರಸಾದ್ ಹೇಳಹೊರಟ ಕ್ರೈಂ ಕಾಮಿಡಿ ಕಥೆ!

ನಿರ್ದೇಶಕ ಗುರುಪ್ರಸಾದ್ ಹೊಸ ಚಿತ್ರ ತಯಾರಿಯಲ್ಲಿ ನಿರತವಾಗಿದ್ದು ದೇಶವು ಕೊರೋನಾ ಲಾಕ್ ಡೌನ್ ನಲ್ಲಿರುವಾಗಲೇ ಶೂಟಿಂಗ್ ಪ್ರಾರಂಭಿಸಲು ಯೋಜಿಸಿದ್ದಾರೆ. ಇನ್ನು ಈ ಚಿತ್ರಕ್ಕೆ "ಲಾಕ್ ಡೌನ್" ಎಂದೇ ನಾಮಕರಣ ಮಾಡಲು ನಿರ್ಧರಿಸಲಾಗಿದೆಯಂತೆ.
'ಲಾಕ್‌ಡೌನ್'- ಇದು ಗುರುಪ್ರಸಾದ್ ಹೇಳಹೊರಟ ಕ್ರೈಂ ಕಾಮಿಡಿ ಕಥೆ!
'ಲಾಕ್‌ಡೌನ್'- ಇದು ಗುರುಪ್ರಸಾದ್ ಹೇಳಹೊರಟ ಕ್ರೈಂ ಕಾಮಿಡಿ ಕಥೆ!
Updated on

ನಿರ್ದೇಶಕ ಗುರುಪ್ರಸಾದ್ ಹೊಸ ಚಿತ್ರ ತಯಾರಿಯಲ್ಲಿ ನಿರತವಾಗಿದ್ದು ದೇಶವು ಕೊರೋನಾ ಲಾಕ್ ಡೌನ್ ನಲ್ಲಿರುವಾಗಲೇ ಶೂಟಿಂಗ್ ಪ್ರಾರಂಭಿಸಲು ಯೋಜಿಸಿದ್ದಾರೆ. ಇನ್ನು ಈ ಚಿತ್ರಕ್ಕೆ "ಲಾಕ್ ಡೌನ್" ಎಂದೇ ನಾಮಕರಣ ಮಾಡಲು ನಿರ್ಧರಿಸಲಾಗಿದೆಯಂತೆ. ಕೊರೋನಾವೈರಸ್ ಆತಂಕದ ಮಧ್ಯೆಯೇ ನಗುವಿನ ಅಲೆ ಎಬ್ಬಿಸಲು ನಿರ್ದೇಶಕ ತಯಾರಾಗುತ್ತಿದ್ದಾರೆ.

ಚಿತ್ರ ಒಂದು ಕ್ರೈಂ ಕಾಮಿಡಿ ಕಥಾನಕವಾಗಿದ್ದು ಗುರುಪ್ರಸಾದ್ ಮುಖ್ಯ ಪಾತ್ರದಲ್ಲಿದ್ದಾರೆ. ನಿರ್ಮಾಣ ಸಂಸ್ಥೆಗಳ ಜತೆ ಮಾತುಕತೆ ಅಂತಿಮ ಹಂತದಲ್ಲಿದೆ.

"ಲಾಕ್‌ಡೌನ್" ಎರಡು ಗಂಟೆ ಕಾಲದ ಚಿತ್ರವಾಗಿರಲಿದೆ. ಯಾವುದೇ ಹಾಡುಗಳಿಲ್ಲದೆ  ಕೇವಲ ಕಥಾನಕವನ್ನಷ್ಟೇ ಒಳಗೊಳ್ಳಲಿದೆ. ನಿರ್ದೇಶಕರು ಚಿತ್ರದಲ್ಲಿ ಅಭಿನಯಿಸುವ ನಟ ನಟಿಯರನ್ನು ಅತಿ ಶೀಘ್ರದಲ್ಲಿ ಆಯ್ಕೆ ಮಾಡಲಿದ್ದಾರೆ. ಗುರುಪ್ರಸಾದ್ ತಮ್ಮ ಅಧಿಕೃತ ಅಪ್ಲಿಕೇಶನ್‌ನಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲಿದ್ದು, ಅದಕ್ಕಾಗಿ ತಯಾರಿ ನಡೆದಿದೆ. "100 ರು. ಪಾವತಿಸಿ ಈ ಕ್ರೈಮ್ ಕಾಮಿಡಿಯನ್ನು ಪ್ರೇಕ್ಷಕರು ವೀಕ್ಷಿಸಲು ಸಾಧ್ಯವಾಗಲಿದೆ" ಎಂದು ಗುರುಪ್ರಸಾದ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com