ಲೈಫ್ ಈಸ್ ಬ್ಯೂಟಿಫುಲ್ ಎನ್ನುತ್ತಿದ್ದಾರೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್

ದಿಯಾ' ಸಿನಿಮಾದಿಂದ ಭಾರಿ ಯಶಸ್ಸು ಪಡೆದುಕೊಂಡ ನಟ ಪೃಥ್ವಿ ಅಂಬರ್‌. ಆ ಬಳಿಕ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಹರಿದುಬರಲು ಆರಂಭಿಸಿವೆ.
ಪೃಥ್ವಿ ಅಂಬರ್
ಪೃಥ್ವಿ ಅಂಬರ್
Updated on

'ದಿಯಾ' ಸಿನಿಮಾದಿಂದ ಭಾರಿ ಯಶಸ್ಸು ಪಡೆದುಕೊಂಡ ನಟ ಪೃಥ್ವಿ ಅಂಬರ್‌. ಆ ಬಳಿಕ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಹರಿದುಬರಲು ಆರಂಭಿಸಿವೆ.

ನಟ ಪೃಥ್ವಿ ಅಂಬರ್  ಈಗ 'ಲೈಫ್‌ ಈಸ್‌ ಬ್ಯೂಟಿಫುಲ್‌' ಎನ್ನುತ್ತಿದ್ದಾರೆ. ಯಾಕೆಂದರೆ, ಅವರ ಹೊಸ ಸಿನಿಮಾ ಹೆಸರು ಲೈಫ್‌ ಈಸ್‌ ಬ್ಯೂಟಿಫುಲ್‌! ಈ ಟೈಟಲ್‌ ಅನ್ನು ನಟ ಡಾಲಿ ಧನಂಜಯ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಪೃಥ್ವಿಯ ಹೊಸ ಸಿನಿಮಾ ಶೀರ್ಷಿಕೆ ಲಾಂಚ್‌ ಮಾಡಲು ಖುಷಿ ಎನಿಸುತ್ತಿದೆ. ಟೈಟಲ್‌ ರೀತಿಯೇ ಟೀಮ್‌ ಕೂಡ ಭರವಸೆ ಮೂಡಿಸುವಂತಿದೆ' ಎಂದು ಧನಂಜಯ ಟ್ವೀಟ್‌ ಮಾಡಿದ್ದಾರೆ.

'ಮಮ್ಮಿ', 'ದೇವಕಿ' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಲೋಹಿತ್‌ ಎಚ್. ಅವರು ಇತ್ತೀಚೆಗಷ್ಟೇ ಆರಂಭಿಸಿರುವ 'ಫ್ರೈಡೇ ಫಿಲ್ಮ್ಸ್‌' ಮತ್ತು 'ಸಿಲ್ವರ್‌ ಟ್ರೇನ್‌ ಇಂಟರ್‌ನ್ಯಾಷನಲ್‌' ಬ್ಯಾನರ್‌ ಮೂಲಕ 'ಲೈಫ್‌ ಈಸ್‌ ಬ್ಯೂಟಿಫುಲ್‌' ನಿರ್ಮಾಣ ಆಗಲಿದೆ. ನಿರ್ಮಾಪಕ ಕಿಶೋರ್‌ ನರಸಿಂಹಯ್ಯ ಬಂಡವಾಳ ಹೂಡುತ್ತಿದ್ದಾರೆ. ಅರುಣ್‌ ಕುಮಾರ್‌ ಮತ್ತು ಸಾಬು ಅಲೋಶಿಯಸ್‌ ಜೊತೆಯಾಗಿ ನಿರ್ದೇಶನ ಮಾಡಲಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್‌ ಆರಂಭ ಆಗಲಿದೆ.

ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು 'ಲೈಫ್‌ ಈಸ್‌ ಬ್ಯೂಟಿಫುಲ್‌' ಚಿತ್ರದ ಟೈಟಲ್‌ ಪೋಸ್ಟರ್‌ ಅನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಈ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾದಲ್ಲಿ ಪೃಥ್ವಿ ಅವರ ಲುಕ್‌ ಹೇಗಿರಲಿದೆ ಎಂಬುದು ಇನ್ನೂ ರಿವೀಲ್‌ ಆಗಿಲ್ಲ. ಅವರಿಗೆ ಜೋಡಿಯಾಗಿ ಯಾರು ನಟಿಸುತ್ತಾರೆ? ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಯಾವೆಲ್ಲ ಕಲಾವಿದರು ಹಣ್ಣ ಹಚ್ಚಲಿದ್ದಾರೆ ಎಂಬುದು ಕೂಡ ಇನ್ನಷ್ಟೇ ಗೊತ್ತಾಗಬೇಕಿದೆ. ಸೆಪ್ಟಂಬರ್ ತಿಂಗಳಿನಲ್ಲಿ ಶೂಟಿಂಗ್ ಅರಂಭಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com