ಸಿನಿಮಾ ಸುದ್ದಿ

ಅಕ್ಟೋಬರ್‌ನಲ್ಲಿ ಅಭಿಷೇಕ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಶುರು 

ಅಕ್ಟೋಬರ್‌ನಲ್ಲಿ ಅಭಿಷೇಕ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಶುರು 
ಬ್ಯಾಡ್ ಮ್ಯಾನರ್ಸ್
Published On :

ಅಭಿಷೇಕ್ ಅಂಬರೀಶ್ ಅಭಿನಯದ ನಿರ್ದೇಶಕ ಸೂರಿ ಆಕ್ಷನ್ ಕಟ್ ಹೇಳಿರುವ ಚಿತ್ರ "ಬ್ಯಾಡ್ ಮ್ಯಾನರ್ಸ್" ನ ಶೂಟಿಂಗ್ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಆಕ್ಷನ್ ಸನ್ನಿವೇಶಗಳೊಂದಿಗೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಸೂರಿ ಹೇಳಿದ್ದಾರೆ.

ಚಿತ್ರತಂಡ ಇದೀಗ ಶೂಟಿಂಗ್ ಗಾಗಿ ಸ್ಥಳಗಳನ್ನು ಅಂತಿಮಗೊಳಿಸುತ್ತಿದೆ ಮತ್ತು ಸ್ಟಂಟ್ ನಿರ್ದೇಶಕರನ್ನು  ಹುಡುಕುತ್ತಿದೆ. "ಇದು ನಟನಿಗೆ ಕಠಿಣ ಕೆಲಸವಾಗಿರುಉವುದಿಲ್ಲ. ಅಭಿಷೇಕ್ ಅವರು ಕಥೆಯನ್ನು ಕೇಳಿದ ಮತ್ತು ಇಷ್ಟಪಟ್ಟ ದಿನದಿಂದಲೇ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ."ಸೂರಿ ಹೇಳುತ್ತಾರೆ.

ಏತನ್ಮಧ್ಯೆ, ಚಿತ್ರತಂಡವು ಉಳಿದ ಪಾತ್ರವರ್ಗ ಬಗೆಗೆ ಗಮನ ಹರಿಸುತ್ತಿದೆ. ವಿವಿಧ ನಟರೊಂದಿಗೆ ಮಾತುಕತೆ ನಡೆಯುತ್ತಿದೆ. ಬ್ಯಾಡ್ ಮ್ಯಾನರ್ಸ್‌ನ ಫಸ್ಟ್ ಲುಕ್ ಅನ್ನು ಮೇ 29 ರಂದು ಅಂಬರೀಶ್ ಅವರ ಜನ್ಮ ದಿನಾಚರಣೆಯಂದು ಬಿಡುಗಡೆ ಮಾಡಲಾಲಾಗಿತ್ತು. ಅದು ಸಾಕಷ್ಟು ಹವಾ ಸೃಷ್ಟಿಸಿತ್ತು. ಆದರೆ ಇದು ಆಕ್ಷನ್ ಡ್ರಾಮಾ ಎಂದಲ್ಲದೆ ಹೆಚ್ಚಿನ ವಿವರ ನೀಡಲು ಸೂರಿ ನಿರಾಕರಿಸಿದ್ದಾರೆ.

ಸುದೀರ್ ಕೆಎಂ ನಿರ್ಮಿಸಿದ ಚಿತ್ರದಲ್ಲಿ ಸುರೇಂದ್ರ ನಾಥ್ ಮತ್ತು ಅಮ್ರಿ  ನಿರ್ದೇಶಕರೊಂದಿಗೆ ಜತೆಯಾಗಿದ್ದಾರೆ. ಚರಣ್ ರಾಜ್ ಸಂಗೀತ, ಶೇಕರ್ ಎಸ್ (ಡಿಎಫ್‌ಡಿ) ಛಾಯಾಗ್ರಹಣ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನಕಾರರಾಗಿದ್ದು ಬ್ಯಾಡ್ ಮ್ಯಾನರ್ಸ್‌ನಲ್ಲಿ ರಾಜಕೃಷ್ಣನ್ ಹ್ಯಾಂಡಲ್ ಸೌಂಡ್ ಎಂಜಿನಿಯರಿಂಗ್ ಮತ್ತು ಕಲಾ ವಿಭಾಗದ ಉಸ್ತುವಾರಿಯಾಗಿ ಸುರೇಶ್ ಭಾಗನವರ್ ಇದ್ದಾರೆ. ಚಿತ್ರವು ಅಮರ್ ನಂತರ ಅಭಿಷೇಕ್ ಅವರ ಎರಡನೇ ಸಿನಿಮಾ ಆಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.