ಸೈಕಲ್ ನಲ್ಲಿ ಬೆಂಗಳೂರು ಸುತ್ತಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್- ವಿಡಿಯೋ

ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆ ಮತ್ತು ಲಾಕ್ ಡೌನ್ ಕಾರಣದಿಂದ ಕಳೆದ ನಾಲ್ಕು ತಿಂಗಳಿನಿಂದ ಮನೆಯಲ್ಲಿಯೇ  ಇದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಈಗ ತನ್ನ ನಿಯಮಿತ ವರ್ಕ್ ಔಟ್ ನ್ನು ಪುನರ್ ಆರಂಭಿಸಿದ್ದಾರೆ.
ನಟ ಪುನೀತ್ ರಾಜ್ ಕುಮಾರ್
ನಟ ಪುನೀತ್ ರಾಜ್ ಕುಮಾರ್
Updated on

ಬೆಂಗಳೂರು: ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆ ಮತ್ತು ಲಾಕ್ ಡೌನ್ ಕಾರಣದಿಂದ ಕಳೆದ ನಾಲ್ಕು ತಿಂಗಳಿನಿಂದ
ಮನೆಯಲ್ಲಿಯೇ  ಇದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಈಗ ತನ್ನ ನಿಯಮಿತ ವರ್ಕ್ ಔಟ್ ನ್ನು ಪುನರ್ ಆರಂಭಿಸಿದ್ದಾರೆ.

ಇತ್ತೀಚಿಗೆ ಬೈಸಿಕಲ್ ನಲ್ಲಿ ಉದ್ಯಾನ ನಗರಿಯನ್ನು ಸುತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸದಾಶಿವನಗರದ ಮನೆಯಿಂದ ಸೈಕಲ್ ಪ್ರಯಾಣ ಆರಂಭಿಸಿರುವ ಪುನೀತ್ ರಾಜ್ ಕುಮಾರ್, ಮೆಕ್ರಿ ಸರ್ಕಲ್, ವಸಂತ ನಗರ, ಚಾಲುಕ್ಯ ಸರ್ಕಲ್, ವಿಧಾನ ಸೌಧ, ಬಹು ಅಂತಸ್ಥಿನ ಕಟ್ಟಡ, ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಮಹಾತ್ಮ ಗಾಂಧಿ ರಸ್ತೆಯಲ್ಲಿ ಪೆಟ್ಲು ತುಳಿದು ಆನಂದಿಸಿದ್ದಾರೆ.

ಈ ಹಿಂದೆ ಕೂಡಾ ಸದಾಶಿವನಗರದಿಂದ ನಂದಿ ಬೆಟ್ಟದವರೆಗೂ 60 ಕಿಲೋ ಮೀಟರ್ ದೂರ ಸೈಕಲ್ ನಲ್ಲಿಯೇ ಪ್ರಯಾಣ
ಮಾಡಿದ್ದರು. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com