'ಶುಗರ್ ಲೆಸ್'ನಲ್ಲಿ ಪೃಥ್ವಿ ಅಂಬಾರ್ ಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿ

ನಿರ್ಮಾಣದಿಂದ ನಿರ್ದೇಶನಕ್ಕೆ ಕಾಲಿಟ್ಟ ಕೆ ಎಂ ಶಶಿಧರ್ ಅವರ ಮೊದಲ ನಿರ್ದೇಶನದ ಚಿತ್ರ ಶುಗರ್ ಲೆಸ್. ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಆಯ್ಕೆಯಾಗಿದ್ದಾರೆ.
ಪ್ರಿಯಾಂಕ ತಿಮ್ಮೇಶ್

ಸರಳ ಮುಹೂರ್ತದೊಂದಿಗೆ ಕಳೆದ ಗುರುವಾರ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು ಈ ಸಂದರ್ಭದಲ್ಲಿ ಪ್ರಿಯಾಂಕಾ ಆಯ್ಕೆ ಕುರಿತು ಘೋಷಿಸಲಾಯಿತು.

ಗಣಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಪ್ರಿಯಾಂಕಾ ತಮಿಳು ಮತ್ತು ಮಲಯಾಳಂನಲ್ಲಿ ಕೂಡ ನಟಿಸಿದ್ದಾರೆ. ಪಟಾಕಿ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕಾ ಇದೀಗ ತಮ್ಮ ಬಹು ನಿರೀಕ್ಷಿತ ಚಿತ್ರ ಭೀಮ ಸೇನ ನಳ ಮಹರಾಜ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

ಸೆಪ್ಟೆಂಬರ್ 14ರಿಂದ ಶುಗರ್ ಲೆಸ್ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಪೃಥ್ವಿ ಅಂಬರ್ ಈ ಚಿತ್ರದ ಜೊತೆಗೆ ಲೈಫ್ ಈಸ್ ಬ್ಯೂಟಿಫುಲ್ ನಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಸಕ್ಕರೆ ಕಾಯಿಲೆ ಹೊಂದಿರುವ ಯುವಜನತೆಯ ಕಥೆಯನ್ನು ತೋರಿಸಲಾಗುತ್ತದೆ. ದತ್ತಣ್ಣ ಕೂಡ ಇದರಲ್ಲಿ ಅಭಿನಯಿಸುತ್ತಿದ್ದಾರೆ.

ಅನೂಪ್ ಸೀಳಿನ್ ಸಂಗೀತ,ಲವಿತ್ ಕ್ಯಾಮರಾ ಕೈಚಳಕವಿದ್ದು ಪುಷ್ಕರ್ ಫಿಲ್ಮ್ಸ್ ಮತ್ತು ದಿಶಾ ಎಂಟರ್ಟೈನರ್ಸ್ ನಿರ್ಮಾಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com