ಚಿರು ಪುತ್ರ, ಮೇಘನಾ ರಾಜ್ ಸುಂದರ್ ರಾಜ್ ಗೂ ಕೊರೋನಾ ಪಾಸಿಟಿವ್

ಇತ್ತೀಚೆಗಷ್ಟೇ ತೊಟ್ಟಿಲ ಶಾಸ್ತ್ರ ಮುಗಿಸಿ ನಿರುಮ್ಮಳವಾಗಿದ್ದ ಮೇಘನಾ ಹಾಗೂ ಅವರ ಪೋಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 
ಪೋಷಕರೊಂದಿಗೆ ಮೇಘನಾ ರಾಜ್
ಪೋಷಕರೊಂದಿಗೆ ಮೇಘನಾ ರಾಜ್
Updated on: 

ಬೆಂಗಳೂರು: ಇತ್ತೀಚೆಗಷ್ಟೇ ತೊಟ್ಟಿಲ ಶಾಸ್ತ್ರ ಮುಗಿಸಿ ನಿರುಮ್ಮಳವಾಗಿದ್ದ ಮೇಘನಾ ಹಾಗೂ ಅವರ ಪೋಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 

ಮೇಘನಾ ತಂದೆ, ನಟ ಸುಂದರರಾಜ್, ತಾಯಿ ಪ್ರಮೀಳಾ ಜೋಷಾಯ್, ಜ್ಯೂನಿಯರ್ ಚಿರು ಹಾಗೂ ಸ್ವತಃ ಮೇಘನಾ ಅವರಲ್ಲಿಯೂ ಸೋಂಕು ದೃಢಪಟ್ಟಿದೆ.

ನಮ್ಮ ಕುಟುಂಬದ ಎಲ್ಲರ ಮೇಲೂ ಕೊರೊನಾ ಪರಿಣಾಮ ಬೀರಿದೆ. ಮೇಘನಾ ಮತ್ತು ಮಗುವಿಗೆ ಕೂಡ ಪಾಸಿಟಿವ್‌ ವರದಿ ಬಂದಿದೆ ನಟ ಸುಂದರ್ ರಾಜ್ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಪ್ರಮೀಳಾ ಜೋಷಾಯ್‌ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಸುಂದರ್‌ ರಾಜ್‌ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಮೇಘನಾ ಮತ್ತು ಚಿರು ಪುತ್ರ ಮನೆಯಲ್ಲೇ ಐಸೋಲೇಷನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com