ಪಿಜ್ಜಾ ಡೆಲಿವರಿ ಬಾಯ್ ವಿರುದ್ಧ ದೂರು, 'ಅಡಲ್ಟ್ ಚಾಟ್ ಗ್ರೂಪ್' ಗೆ ನಟಿಯ ಮೊಬೈಲ್ ನಂಬರ್ ಅಪ್ಲೋಡ್ ಮಾಡಿದ ಭೂಪ, ಎಫ್ಐಆರ್ ದಾಖಲು!

ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ತನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಪಿಡ್ಡಾ ಡೆಲಿವರಿ ಬಾಯ್ ಓರ್ವ ಆಕೆಯ ಖಾಸಗಿ ಮೊಬೈಲ್ ನಂಬರ್ ಅನ್ನು ಅಡಲ್ಟ್ ಚಾಟ್ ಗ್ರೂಪ್ ಗೆ ಷೇರ್ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ನಟಿ ಗಾಯತ್ರಿ ಸಾಯಿ
ನಟಿ ಗಾಯತ್ರಿ ಸಾಯಿ
Updated on: 

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ತನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಪಿಡ್ಡಾ ಡೆಲಿವರಿ ಬಾಯ್ ಓರ್ವ ಆಕೆಯ ಖಾಸಗಿ ಮೊಬೈಲ್ ನಂಬರ್ ಅನ್ನು ಅಡಲ್ಟ್ ಚಾಟ್ ಗ್ರೂಪ್ ಗೆ ಷೇರ್ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ದಕ್ಷಿಣ ಭಾರತದ ಖ್ಯಾತ ನಟಿ ಗಾಯತ್ರಿ ಸಾಯಿ ಅವರ ಖಾಸಗಿ ಮೊಬೈಲ್ ಸಂಖ್ಯೆಯನ್ನು ಪಿಜ್ಜಾ ಡೆಲಿವರಿ ಬಾಯ್ ಅಡಲ್ಟ್ ಚಾಟ್ ಗ್ರೂಪ್ ಗೆ ಷೇರ್ ಮಾಡಿದ್ದು, ಈ ಕುರಿತಂತೆ ಸ್ವತಃ ನಟಿ ಗಾಯತ್ರಿ ಸಾಯಿ ಅವರು ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದಾರೆ.

ಗಾಯತ್ರಿ ಸಾಯಿ ಅವರು ಹೇಳಿಕೊಂಡಂತೆ, ಇದೇ ಫೆಬ್ರವರಿ 9ರಂದು ಪಿಜ್ಜಾ ಆರ್ಡರ್ ಮಾಡಿದ್ದೆ. ಆದರೆ ಪಿಜ್ಜಾ ಮನೆಗೆ ಬಂದಾಗ ಅದನ್ನು ತೆರೆದು ನೋಡಿದಾಗ ಅದು ತಿನ್ನುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಈ ಕುರಿತು ಪಿಡ್ಡಾ ಡೆಲಿವರಿ ಬಾಯ್ ನನ್ನು ಪ್ರಶ್ನಿಸಿದಾಗ ಆತ ಉಡಾಫೆ ಉತ್ತರ ನೀಡಿದ. ಅಲ್ಲದೆ ನನ್ನ ಖಾಸಗಿ ಮೊಬೈಲ್ ನಂಬರ್ ಅನ್ನು ಅಡಲ್ಟ್ ಚಾಟ್ ಗ್ರೂಪ್ ಗೆ ಹಂಚಿಕೊಂಡಿದ್ದು, ನಿತ್ಯ ನೂರಾರು ಮಂದಿ ಕರೆ ಮಾಡಿ ಅಸಹ್ಯವಾಗಿ ಮಾತನಾಡುತ್ತಿದ್ದಾರೆ. ಅಲ್ಲದೆ ನನ್ನ ವಾಟ್ಸಪ್ ನಂಬರ್ ಗೆ ಅಸಭ್ಯ ಮೆಸೇಜ್ ಮಾಡುತ್ತಿದ್ದಾರೆ. ಈ ಕುರಿತಂತೆ ನಾನು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ಪಿಜ್ಜಾ ಡೆಲಿವರಿ ಬಾಯ್ ನ ಫೋಟೋ ಕೂಡ ಅಪ್ಲೋಡ್ ಮಾಡಿದ್ದರು.

ಈ ಟ್ವೀಟ್ ಗೆ ಸಂಬಂಧಿಸಿದಂತೆ ಇದೀಗ ಚೆನ್ನೈ ಪೊಲೀಸರು ಕ್ರಮ ಕೈಗೊಂಡಿದ್ದು, ಎಫ್ ಐರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆಯೂ ಟ್ವೀಟ್ ಮಾಡಿರುವ ನಟಿ ಗಾಯತ್ರಿ ಸಾಯಿ ಕ್ರಮ ಕೈಗೊಂಡ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

ದಕ್ಷಿಣ ಚಿತ್ರರಂಗದಲ್ಲಿ ಗಾಯತ್ರಿ ಚಿರಪರಿಚಿತರಾಗಿದ್ದು, ಬಾಲಿವುಡ್ ನ ಒಂದು ಚಿತ್ರದಲ್ಲಿಯೂ ನಟಿಸಿದ್ದಾರೆ. 1990ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ‘ಅಂಜಲಿ’ ತಮಿಳು ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಗಾಯತ್ರಿ ಸಾಯಿ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದರು. ಇದೀಗ ಬಾಲಿವುಡ್ ಸೇರಿದಂತೆ ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com