ಲಾಕ್ಡೌನ್ ನಿಯಮ ಮೀರಿ ಮನೆಯಲ್ಲೇ ಜೂಜಾಟ: ದಕ್ಷಿಣ ಭಾರತದ ಖ್ಯಾತ ನಟ ಶ್ಯಾಮ್ ಸೇರಿ ಹಲವರ ಬಂಧನ

ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಚೆನ್ನೈನಲ್ಲಿ ಹೇರಲಾಗಿರುವ ಲಾಕ್ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನೆಯಲ್ಲಿ ಗುಂಪು ಸೇರಿಕೊಂಡು ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ದಕ್ಷಿಣ ಭಾರತದ ಖ್ಯಾತ ನಟ ಶ್ಯಾಮ್ ಸೇರಿ ಹಲವರನ್ನು ಬಂಧಿಸಿದ್ದಾರೆ.
ನಟ ಶ್ಯಾಮ್
ನಟ ಶ್ಯಾಮ್
Updated on

ಚೆನ್ನೈ: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಚೆನ್ನೈನಲ್ಲಿ ಹೇರಲಾಗಿರುವ ಲಾಕ್ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನೆಯಲ್ಲಿ ಗುಂಪು ಸೇರಿಕೊಂಡು ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ದಕ್ಷಿಣ ಭಾರತದ ಖ್ಯಾತ ನಟ ಶ್ಯಾಮ್ ಸೇರಿ ಹಲವರನ್ನು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ಚೆನ್ನೈನ ನುಂಗಬಾಕಮ್ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ನಟ ಶ್ಯಾಮ್ ಜೂಜಾಟ ಆಯೋಜಿಸಿದ್ದರು. ಈ ಜೂಜಾಟಕ್ಕೆ ಕಾಲಿವುಡ್ ಖ್ಯಾತನಾಮರು ಪಾಲ್ಗೊಂಡಿದ್ದರು ಎನ್ನಲಾಗಿದೆ. ಇದೇ ಜೂಜಾಟದಲ್ಲಿ ಕಾಲಿವುಡ್ ಖ್ಯಾತ ನಟರೊಬ್ಬರು ಲಕ್ಷಾಂತರ ರೂಗಳನ್ನು ಕಳೆದುಕೊಂಡಿದ್ದಾರೆ ಎಂದೂ ವರದಿ ಮಾಡಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಚೆನ್ನೈ ಪೊಲೀಸರು ದಿಢೀರ್ ದಾಳಿ ಮಾಡಿ ನಟ ಶ್ಯಾಮ್ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಹಣದ ರೂಪದಲ್ಲಿ ಟೋಕನ್
ಇನ್ನು ಈ ಜೂಜಾಟಕ್ಕೆ ಹಣದ ರೂಪದಲ್ಲಿ ಟೋಕನ್ ಗಳನ್ನು ಇಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರತೀ ಟೋಕನ್ ಗೆ ಇಂತಿಷ್ಟು ಹಣ ಎಂದು ಮೌಲ್ಯೀಕರಿಸಲಾಗಿತ್ತು.

ಯುವಕನ ಆತ್ಯಹತ್ಯೆ ಬಳಿಕ ಎಚ್ಚೆತ್ತಿದ್ದ ಪೊಲೀಸರು
ತಮಿಳುನಾಡಿನಲ್ಲಿ ಕೊರೋನಾ ವೈರಸ್ ಲಾಕ್ಡೌನ್ ಹೇರಿದ ಬಳಿಕ ಕೆಲಸವಿಲ್ಲದೇ ಹಲವು ಯುವಕರು ಜೂಜಾಟದ ಮೊರೆ ಹೋಗಿದ್ದರು. ಇತ್ತೀಚೆಗೆ ಯುವಕನೋರ್ವ ಆನ್ ಲೈನ್ ಜೂಜಾಟದಲ್ಲಿ 20 ಸಾವಿರ ರೂ ಕಳೆದುಕೊಂಡು ಅದೇ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಈ ಸುದ್ದಿ ವ್ಯಾಪಕ ವೈರಲ್ ಆಗಿ ಚೆನ್ನೈ ಪೊಲೀಸರನ್ನು ಮದ್ರಾಸ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಈ ಘಟನೆ ಬಳಿಕ ತಮಿಳುನಾಡಿನಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ನಿರಂತರ ದಾಳಿ ನಡೆಸುತ್ತಿದ್ದಾರೆ.
 
ಅಲ್ಲದೆ RummyPassion, Nazara, LeoVegas, Spartan Poker, Ace2Three, PokerDangal, Pocket52, My11Circke and Genesis Casino ಸೇರಿದಂತೆ ಹಲವು ಆನ್ ಲೈನ್ ಗೇಮ್ ಗಳನ್ನು ಪಟ್ಟಿ ಮಾಡಲಾಗಿದ್ದು, ಇವುಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಪುಗಳೇಂದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com