ನಿರ್ದೇಶಕಿ ಸಂಜನಾ ರೆಡ್ಡಿ ಸ್ಥಿತಿ ಗಂಭೀರ, ವೆಂಟಿಲೇಟರ್ ಅಳವಡಿಕೆ!

ಕರ್ಣಂ ಮಲ್ಲೇಶ್ವರಿ ಜೀವನಾಧಾರಿತ ಚಿತ್ರದ ನಿರ್ದೇಶಕಿ ಸಂಜನಾ ರೆಡ್ಡಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
ಸಂಜನಾ ರೆಡ್ಡಿ
ಸಂಜನಾ ರೆಡ್ಡಿ
Updated on: 

ಕರ್ಣಂ ಮಲ್ಲೇಶ್ವರಿ ಜೀವನಾಧಾರಿತ ಚಿತ್ರದ ನಿರ್ದೇಶಕಿ ಸಂಜನಾ ರೆಡ್ಡಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ತೆಲುಗಿನಲ್ಲಿ ರಾಜು ಗಾಡು ಚಿತ್ರವನ್ನು ನಿರ್ದೇಶಿಸಿದ್ದ ಸಂಜನಾ ರೆಡ್ಡಿ ಅವರು ಇದೀಗ ಕರ್ಣಂ ಮಲ್ಲೇಶ್ವರಿ ಜೀವನಾಧಾರಿತ ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದರು. 

ಉಸಿರಾಟದ ತೊಂದರೆ ಹಾಗೂ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದ್ ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿರುವುದರಿಂದ ವೆಂಟಿಲೇಟರ್ ನಲ್ಲಿ ಇಡಲಾಗಿದೆ. 

ಸಂಜನಾ ಸ್ಥಿತಿ ಗಂಭೀರ ಎಂಬ ವರದಿಗಳನ್ನು ಅಲ್ಲಗಳೆದಿರುವ, ಕರ್ಣಂ ಮಲ್ಲೇಶ್ವರಿ ಜೀವನಚರಿತ್ರೆಯ ನಿರ್ಮಾಪಕ ಕೋನಾ ವೆಂಕಟ್ ಅವರು, ಸಂಜನಾ ರೆಡ್ಡಿ ಕಳೆದ ಮೂರು ದಿನಗಳಿಂದ ದ್ರವ ರೂಪದ ಆಹಾರ ಸೇವಿಸುತ್ತಿದ್ದರು. ಹೀಗಾಗಿ ಸ್ವಲ್ಪ ಅಸ್ವಸ್ಥರಾಗಿದ್ದಾರೆ. ಚಿಂತೆ ಮಾಡುವ ಅಗತ್ಯವಿಲ್ಲ. ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com