ಟ್ರೆಂಡ್ ಸೃಷ್ಟಿಸುತ್ತಿದೆ ಅರ್ಜುನ್ ಕಿಶೋರ್ ಚಂದ್ರ ನಟನೆಯ 'ಸೇರು ನನ್ನ ತೋಳಲ್ಲಿ' ಆಲ್ಬಂ

ಆಲ್ಬಂ ಟ್ರೆಂಡ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ತುಂಬಾ ವರ್ಷಗಳೇ ಆಗಿವೆ. ಇದೀಗ ಇದೇ ಸಾಲಿಗೆ ’ಸೇರು ನನ್ನ ತೋಳಲ್ಲಿ’ ಎಂಬ ಹಾಡು ಸೇರಿಕೊಂಡಿದೆ.
ಅರ್ಜನ್ ಕಿಶೋರ್ ಮತ್ತು ಪಾಯಲ್ ರಾಧಕೃಷ್ಣ
ಅರ್ಜನ್ ಕಿಶೋರ್ ಮತ್ತು ಪಾಯಲ್ ರಾಧಕೃಷ್ಣ

ಆಲ್ಬಂ ಟ್ರೆಂಡ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ತುಂಬಾ ವರ್ಷಗಳೇ ಆಗಿವೆ. ಇದೀಗ ಇದೇ ಸಾಲಿಗೆ ’ಸೇರು ನನ್ನ ತೋಳಲ್ಲಿ’ ಎಂಬ ಹಾಡು ಸೇರಿಕೊಂಡಿದೆ.

ಹಿಂದೆ ಲೈಫ್ 360’ ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್ ಚಂದ್ರ ಇದೇ ’ಸೇರು ನನ್ನ ತೋಳಲ್ಲಿ’ ಹಾಡಿನ ಹಿಂದಿನ ರೂವಾರಿ. ಸಾಹಿತ್ಯ ಬರೆಯುವದರ ಜೊತೆಗೆ ಇವರೇ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ’ಭಿನ್ನ’ ಸಿನಿಮಾದ ನಾಯಕಿ ಪಾಯಲ್ ರಾಧಕೃಷ್ಣ ಅರ್ಜುನ್ ಕಿಶೋರ್ ಚಂದ್ರ ಜೋಡಿಯಾಗಿದ್ದಾರೆ. ವೈದ್ಯರಾಗಿ ವಿನಾಯಕ್ ಜೋಷಿ ಕಾಣಿಸಿಕೊಂಡಿದ್ದಾರೆ. 

ರ್ಯಾಪರ್ ಸಿದ್ದ್ ಆಲ್ಬಂನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು ಸುಂದರ ತಾಣಗಳಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಲಾಗಿದ್ದು ಕ್ವಾಲಿಟಿಯಲ್ಲಿ ರಾಜಿ ಮಾಡಿಕೊಳ್ಳದೇ ಗಗನ್.ಜೆ.ಗೌಡ-ಸುನಿಲ್ಕುಮಾರ್ ಜಂಟಿಯಾಗಿ ಕ್ರಾಂತಿ ಕ್ರಿಯೇಷನ್ಸ್ ಮೂಲಕ ಸುಮಾರು ಏಳು ಲಕ್ಷ ಹಾಡಿಗಾಗಿ ಖರ್ಚು ಮಾಡಿದ್ಧಾರೆ.

ಅದ್ವಿಕ್ ಸಂಗೀತ ನಿರ್ದೇಶನದ ಜೊತೆಯಲ್ಲಿ ಹಾಡಿನ ನಿರ್ದೇಶನ ಮಾಡಿದ್ಧಾರೆ. ಹಾಡಿದೆ ಧ್ವನಿಯೂ ಆಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com