ಕೊರೋನಾ ವೈರಸ್ ಭೀತಿ: ಮಕ್ಕಳೊಂದಿಗೆ ಹೃತಿಕ್ ಮನೆಗೆ ತೆರಳಿದ ಸೂಸಾನೆ

ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ತಮ್ಮ ಮಾಜಿ ಪತ್ನಿ ಸೂಸಾನೆ ಮಕ್ಕಳೊಂದಿಗೆ ತಮ್ಮ ಮನೆಗೆ ಆಗಮಿಸಿದ್ದಾರೆ ಎಂದು ನಟ ಹೃತಿಕ್ ರೋಷನ್ ಹೇಳಿದ್ದಾರೆ.
ಹೃತಿಕ್ ದಂಪತಿ
ಹೃತಿಕ್ ದಂಪತಿ
Updated on

ಮುಂಬಯಿ: ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ತಮ್ಮ ಮಾಜಿ ಪತ್ನಿ ಸೂಸಾನೆ ಮಕ್ಕಳೊಂದಿಗೆ ತಮ್ಮ ಮನೆಗೆ ಆಗಮಿಸಿದ್ದಾರೆ ಎಂದು ನಟ ಹೃತಿಕ್ ರೋಷನ್ ಹೇಳಿದ್ದಾರೆ.

ಕೊರೋನಾ ಸೋಂಕಿನ ಭಯದ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ತಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು  ತಿಳಿಸಿದ್ದಾರೆ,

2014 ರಲ್ಲಿ ಹೃತಿಕ್ ಮತ್ತು ಸೂಸಾನೆ ದಂಪತಿ ವಿಚ್ಛೇಧನ ಪಡೆದಿದ್ದರು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಡೀ ದೇಶವೇ ಕೊರೋನಾಕ್ಕಾಗಿ ಒಗ್ಗೂಡಿ ಲಾಕ್ ಡೌನ್ ಮಾಡುತ್ತಿರುವ ಸಂದರ್ಭದಲ್ಲಿ ನಾನು ನನ್ನ ಮಕ್ಕಳನ್ನು ಬೇರೆಯಾಗಿಡುವುದು ನನ್ನ ಕಲ್ಪನೆಗೂ ಸಾಧ್ಯವಿಲ್ಲ ಎಂದು ಸೂಸಾನೆ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಬರೆದು ಕೊಂಡಿದ್ದಾರೆ.

"ಆಳವಾದ ಅನಿಶ್ಚಿತತೆ ಮತ್ತು ಹಲವಾರು ತಿಂಗಳುಗಳ ಸಾಮಾಜಿಕ ಅಂತರ ಮತ್ತು  ಲಾಕ್‌ಡೌನ್‌ಗಳ  ಈ ಸಮಯದಲ್ಲಿ ಜಗತ್ತು ಒಂದಾಗಿರುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ. ವಿಶ್ವದಲ್ಲಿ ಮಾನವೀಯತೆಯು ಒಟ್ಟಿಗೆ ಸೇರುವ ಬಗ್ಗೆ ಮಾತನಾಡುವಾಗ ಪೋಷಕರು ತಮ್ಮ ಮಕ್ಕಳ ಪಾಲನೆಯನ್ನು ಹಂಚಿಕೊಂಡಿರುವುದು ವಿಶೇಷ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com