ರಿಷಭ್ ಶೆಟ್ಟಿ ನಿರ್ದೇಶನದ ರುದ್ರ ಪ್ರಯಾಗದಲ್ಲಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ರಿಷಭ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಸಿನಿಮಾದಲ್ಲಿ ಅನಂತ್ ನಾಗ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಇವರ ಜೊತೆಗೆ ಶೈನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶೈನ್ ಶೆಟ್ಟಿ
ಶೈನ್ ಶೆಟ್ಟಿ
Updated on: 

ರಿಷಭ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಸಿನಿಮಾದಲ್ಲಿ ಅನಂತ್ ನಾಗ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಇವರ ಜೊತೆಗೆ ಶೈನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲಕ್ಷ್ಮಿ ಬಾರಮ್ಮಾ ಧಾರಾವಾಹಿ ಖ್ಯಾತಿಯ ಶೈನ್ ಶೆಟ್ಟಿ ನಿರ್ಧಿಷ್ಟ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಯಣ್ಣ ಫಿಲ್ಮ್ಸ್  ನಿರ್ಮಾಣದ ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ನಟಿಸುವ ಬಗ್ಗೆ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಪ್ರಮುಖ ಪಾತ್ರಕ್ಕಾಗಿ ರಿಷಬ್ ಶೆಟ್ಟಿ ತಲೆಯಲ್ಲಿ ಹಲವು ನಟರ ಹೆಸರು ಬಂದಿದ್ದವು, ಅಂತಿಮವಾಗಿ ಶೈನ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಶೂಟಿಂಗ್ ಆರಂಭವಾದ ಮೇಲೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂತರ ರಿಷಬ್ ಶೆಟ್ಟಿ 4ನೇ ಪ್ರಾಜೆಕ್ಟ್ ಇದಾಗಿದೆ. ಅನಂತ್ ನಾಗ್ ಜೊತೆ  ರಿಷಬ್ ಶೆಟ್ಟಿ 2ನೇ ಪ್ರಾಜೆಕ್ಟ್ ಇದಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಶೂಟಿಂಗ್ ಆರಂಭವಾಗಬೇಕಿತ್ತು, ಲಾಕ್ ಡೌನ್ ಕಾರಣದಿಂದಾಗಿ ಶೂಟಿಂಗ್ ಮುಂದೂಡಲಾಗಿದೆ.

ರುದ್ರಪ್ರಯಾಗಕ್ಕೆ ರಿಷಬ್ ಶೆಟ್ಟಿ ಕಥೆ ಬರೆದಿದ್ದು, ಶ್ರೀಪಾದ ಜೋಶಿ ಮತ್ತು ತ್ರಿಲೋಕ ತ್ರಿವಿಕ್ರಮ ಸಂಭಾಷಣೆ ಬರೆದಿದ್ದಾರೆ. ಅಜನೀಶ್  ಲೋಕನಾಥ್ ಸಂಗೀತ ನೀಡಿದ್ದು,  ಬೆಳಗಾವಿಯಲ್ಲೇ ಶೇ.80 ರಷ್ಟು ಶೂಟಿಂಗ್ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com