ಇಂದು (ಮೇ29) ರೆಬೆಲ್ ಸ್ಟಾರ್ ಅಂಬರೀಶ್ ಜನ್ಮದಿನ. ಅಂಬಿ ಅಭಿಮಾನಿಗಳ ಪಾಲಿಗೆ ಹಬ್ಬ. ಆದರೆ ಈ ವರ್ಷ ಕೊರೋನಾ ಹಾವಳಿ ಕಾರಣ ಲಾಕ್ ಡೌನ್ ಇದ್ದು ಅನೇಕರಿಗೆ ಅಂಬಿ ಸಮಾಧಿ ದರ್ಶನ ಮಾಡಲು ಅವಕಾಶ ಸಿಕ್ಕದೆ ನಿರಾಶರಾಗಿದ್ದಾರೆ. ಆದರೆ ಈ ನಡುವೆ ಅಂಬರೀಶ್ ಪುತ್ರ, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಂಬಿ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ ಅಭಿನಯದ ಎರಡನೇ ಚಿತ್ರ "ಬ್ಯಾಡ್ ಮ್ಯಾನರ್ಸ್" ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಖ್ಯಾತ ನಿರ್ದೇಶಕ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ "ಬ್ಯಾಡ್ ಮ್ಯಾನರ್ಸ್" "ಅಮರ್" ನಂತರದಲ್ಲಿ ಮೂಡಿಬರುತ್ತಿರುವ ಅಭಿಷೇಕ್ ಅವರ ಎರಡನೇ ಚಿತ್ರವಾಗಿದೆ.
ಸ್ಟುಡಿಯೋ 18 ಬ್ಯಾನರ್ ನಡಿ ಸುಧೀರ್ ಕೆ.ಎಂ ನಿರ್ಮಿಸಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.
Advertisement