ಜಯಣ್ಣ ನಿರ್ಮಾಣದ ಮತ್ತೊಂದು ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್?

ಅನಿಲ್ ಕುಮಾರ್ ನಿರ್ದೇಶನದ ಮತ್ತು ಜಯಣ್ಣ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಿಸಲಾಗಿರುವ  "ಶಿವ 143"ದ ಬಿಡುಗಡೆಗೆ ನಟ ಧೀರನ್ ರಾಮ್‌ಕುಮಾರ್ ಎದುರು ನೋಡುತ್ತಿದ್ದಾರೆ. ಆದರೆ ಇದೀಗ ಬಂದಿರುವ ಸುದ್ದಿ ಎಂದರೆ ಇದೇ ನಟ ಮತ್ತೊಮ್ಮೆ ಪ್ರೊಡಕ್ಷನ್ ಹೌಸ್ ಜೊತೆ ಸೇರಿಕೊಂಡಿದ್ದಾರೆ.
ಧೀರನ್ ರಾಮ್‌ಕುಮಾರ್
ಧೀರನ್ ರಾಮ್‌ಕುಮಾರ್
Updated on

ಅನಿಲ್ ಕುಮಾರ್ ನಿರ್ದೇಶನದ ಮತ್ತು ಜಯಣ್ಣ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಿಸಲಾಗಿರುವ  "ಶಿವ 143"ದ ಬಿಡುಗಡೆಗೆ ನಟ ಧೀರನ್ ರಾಮ್‌ಕುಮಾರ್ ಎದುರು ನೋಡುತ್ತಿದ್ದಾರೆ. ಆದರೆ ಇದೀಗ ಬಂದಿರುವ ಸುದ್ದಿ ಎಂದರೆ ಇದೇ ನಟ ಮತ್ತೊಮ್ಮೆ ಪ್ರೊಡಕ್ಷನ್ ಹೌಸ್ ಜೊತೆ ಸೇರಿಕೊಂಡಿದ್ದಾರೆ.

ಮತ್ತೊಂದು ಯೋಜನೆಗಾಗಿ ಧೀರನ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವ ನಿರ್ಮಾಪಕ ಜಯಣ್ಣಮತ್ತು ಬೋಗೇಂದ್ರ ಅವರು ಉತ್ತಮ ಸ್ಕ್ರಿಪ್ಟ್ ಮತ್ತು ಧೀರನ್ ಪಾತ್ರಕ್ಕಾಗಿ ನಿರ್ದೇಶಕರನ್ನೂ ಹುಡುಕುತ್ತಿದ್ದಾರೆ. ಆದರೂ ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಮಾಡಿಲ್ಲ. ಧೀರನ್‌ರ ಚೊಚ್ಚಲ ಚಿತ್ರಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಫೈನಲ್ ಶೆಡ್ಯೂಲ್ ಹಾಗೂ ಬಿಡುಗಡೆ ಮುಂದೂಡಿಕೆಯಾಗಿದೆ. ಸಧ್ಯ ಚಿತ್ರತಂಡ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿಸಿದ್ದು ಅದರ ಕೆಲಸಗಳೀಗ ನಡೆಯುತ್ತಿದೆ.

ಏತನ್ಮಧ್ಯೆ, ತಂಡವು ಚಿತ್ರದ ಟೀಸರ್ ನೊಂದಿಗೆ ಗೆ ತಯಾರಾಗುತ್ತಿದೆ ಮತ್ತು ಆಡಿಯೊ ಲಾಂಚ್ ಮಾಡುವುದಕ್ಕೆ ಸಿದ್ದತೆ ಮಾಡಿದೆ. "ಶಿವ 143"  ಚಿತ್ರಕ್ಕೆ ಮಾನ್ವಿತಾ ಕಾಮತ್ ನಾಯಕಿಯಾಗಿದ್ದು ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಚಿತ್ರವು ಮುಂದಿನ ವರ್ಷ ತೆರೆಗೆ ಬರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com