ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾ ಕೊನೆಯ ಹಂತದ ಶೂಟಿಂಗ್ ಗಾಗಿ ತಂಡ ಕಾಶ್ಮೀರಕ್ಕೆ ಪಯಣ!

ಅಂತಿಮ ಹಂತದ ಶೂಟಿಂಗ್ ಗಾಗಿ ನಿರ್ದೇಶಕ ಕಿರಣ್ ರಾಜ್ ಸೇರಿದಂತೆ 56 ಮಂದಿಯ ಸಿನಿಮಾ ತಂಡ ಕಣಿವೆ ಪ್ರವೇಶಿಸಿದೆ. ರಕ್ಷಿತ್ ಶೆಟ್ಟಿ ನವೆಂಬರ್ 26 ರಂದು ಶೂಟಿಂಗ್ ಸೆಟ್ ಸೇರಲಿದ್ದಾರೆ.
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ
Updated on

ರಕ್ಷಿತ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ, '777 ಚಾರ್ಲಿ' ಸಿನಿಮಾ ತಂಡ ಕೊನೆಯ ಹಂತದ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ತೆರಳಿದೆ.

ಅಂತಿಮ ಹಂತದ ಶೂಟಿಂಗ್ ಗಾಗಿ ನಿರ್ದೇಶಕ ಕಿರಣ್ ರಾಜ್ ಸೇರಿದಂತೆ 56 ಮಂದಿಯ ಸಿನಿಮಾ ತಂಡ ಕಣಿವೆ ಪ್ರವೇಶಿಸಿದೆ. ರಕ್ಷಿತ್ ಶೆಟ್ಟಿ ನವೆಂಬರ್ 26 ರಂದು ಶೂಟಿಂಗ್ ಸೆಟ್ ಸೇರಲಿದ್ದಾರೆ.

14 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು 2 ಭಾಗಗಳಾಗಿ ವಿಂಗಡಿಸಲಾಗಿದೆ, ಈ ವೇಳೆ ಕಾಶ್ಮೀರ, ಚಂಡಿಗಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ.

ಐದು ದಿನಗಳ ಕಾಲ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಯಲಿದೆ,  ಈ ಕ್ಲೈಮ್ಯಾಕ್ಸ್ ಗೆ ಅಧಿಕ ಪ್ರಮಾಣದಲ್ಲಿ ಸ್ನೋ ಫಾಲ್ ಬೇಕಾಗಿದೆ, ಇದನ್ನು ನಾವು ಡಿಸೆಂಬರ್ ತಿಂಗಳಲ್ಲಿ ಕಾಣಬಹುದು, ಕಡಿಮೆ ಹಿಮದಲ್ಲಿ ಬೇಕಾದ ದೃಶ್ಯಗಳ ಶೂಟಿಂಗ್ ಮಾಡಲಿದ್ದೇವೆ ಎಂದು ನಿರ್ದೇಶಕ ಕಿರಣ್ ರಾಜ್ ತಿಳಿಸಿದ್ದಾರೆ.

ಉಳಿದ ಭಾಗದ ಚಿತ್ರೀಕರಣವನ್ನು ವರ್ಷದ ಕೊನೆಯಲ್ಲಿ ಶೂಟಿಂಗ್ ಮಾಡಲಿದ್ದೇವೆ, ಅಂದು ಸಿನಿಮಾದ ಶೂಟಿಂಗ್ ಸಂಪೂರ್ಣವಾಗಲಿದೆ ಇನ್ನೂ ಕಾಶ್ಮೀರದಲ್ಲಿ ಶೂಟಿಂಗ್ ಗಾಗಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಶೂಟಿಂಗ್ ಗಾಗಿ ನಾವು ಅನುಮತಿ ಕೋರಿದ್ದೇವೆ, ಇದೊಂದು ಸಾಹಸಮಯ ಕಾಮಿಡಿ ಸಿನಿಮಾವಾಗಿದ್ದು,  ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಕಿರಣ್ ರಾಜ್ ಒಂದಾಗಿದ್ದಾರೆ. ಪುಷ್ಕರ್ ಫಿಲ್ಮ್ಸ್ ಮತ್ತು ಪರಮಾವೋ ಸ್ಟುಡಿಯೋ ಸಿನಿಮಾ ನಿರ್ಮಾಣ ಮಾಡುತ್ತಿದೆ,

ಅಭಿಜಿತ್ ಮಹೇಶ್ ಸಂಭಾಷಣೆ ಬರೆದಿದ್ದು,ನೊಬಿಲ್ ಪೌಲ್ ಮತ್ತು ಅರವಿಂದ್ ಕಶ್ಯಪ್ ಸಂಗೀತ ನೀಡಿದ್ದಾರೆ.  ತಾರಾಗಣದಲ್ಲಿ ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್, ಮತ್ತು ಸಂಗೀತ ಶೃಂಗೇರಿ ಕೂಡ ಇದ್ದಾರೆ. ಈ ಚಿತ್ರವು ದಕ್ಷಿಣ ಭಾರತದ ನಟ ಬಾಬಿ ಸಿಮ್ಹಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com