ನಾಯಿ ಬೊಗಳುತ್ತೆ ಎಂದು ನಾನು ಬಟ್ಟೆ ಬಿಚ್ಚಿ ಬೊಗಳಲು ಆಗುವುದಿಲ್ಲ: ನನ್ನ ಬಗ್ಗೆ ಮಾತಾಡಿದ್ರೆ ಸುಮ್ಮನಿರಲ್ಲ-ಸಂಜನಾ

ನಾನು ಪಂಚಭಾಷೆ ತಾರೆ, ಪ್ರಮುಖ ನಟರೊಂದಿಗೆ ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದೇನೆ, ನನ್ನ ಬಗ್ಗೆ ಇನ್ನೊಮ್ಮೆ ಮಾತಾಡಿದ್ರೆ ನಾನು ಸುಮ್ಮನೆ ಇರಲ್ಲ ಎಂದು ಪ್ರಶಾಂತ್ ಸಂಬರಗಿಗೆ ನಟಿ ಸಂಜನಾ ಗಲ್ರಾನಿ ಎಚ್ಚರಿಕೆ ನೀಡಿದ್ದಾರೆ.
ಸಂಜನಾ
ಸಂಜನಾ
Updated on: 

ಬೆಂಗಳೂರು: ನಾನು ಪಂಚಭಾಷೆ ತಾರೆ, ಪ್ರಮುಖ ನಟರೊಂದಿಗೆ ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದೇನೆ, ನನ್ನ ಬಗ್ಗೆ ಇನ್ನೊಮ್ಮೆ ಮಾತಾಡಿದ್ರೆ ನಾನು ಸುಮ್ಮನೆ ಇರಲ್ಲ ಎಂದು ಪ್ರಶಾಂತ್ ಸಂಬರಗಿಗೆ ನಟಿ ಸಂಜನಾ ಗಲ್ರಾನಿ ಎಚ್ಚರಿಕೆ ನೀಡಿದ್ದಾರೆ.

ಚಿತ್ರರಂಗದ ಹೆಸರನ್ನು ಹಾಳು ಮಾಡಲಾಗುತ್ತಿದೆ,. ಚಿತ್ರರಂಗವನ್ನು ಇಷ್ಟು ಕಷ್ಟಪಟ್ಟು, ಪ್ರೀತಿಯಿಂದ ದೇವಸ್ಥಾನದ ರೀತಿ ದೊಡ್ಡದಾಗಿ ಕಟ್ಟಲಾಗಿದೆ. ಕನ್ನಡ ಚಿತ್ರರಂಗ ಡ್ರಗ್ಸ್ ನಲ್ಲಿದೆ ಎಂದು ಹೇಳಿ ಕನ್ನಡ ಚಿತ್ರರಂಗದ ಹೆಸರನ್ನು ಹಾಳು ಮಾಡಬೇಡಿ. ಕೆಲವರು ಆ ರೀತಿ ಇದ್ದರೆ ಎಲ್ಲರೂ ಅದೇ ರೀತಿ ಎಂದು ಹೇಳಬೇಡಿ, ಊಹಾಪೋಹ ಮಾಡಬೇಡಿ. ಇದರು ಇಡೀ ಕರ್ನಾಟಕಕ್ಕೇ ಬೇಜಾರಾಗುವ ಸಂಗತಿ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಬೀದಿಯಲ್ಲಿ ನಾಯಿ ಬೊಗಳುತ್ತೆ ಎಂದು ನಾನು ಬಟ್ಟೆ ಬಿಚ್ಚಿ ಬೊಗಳಲು ಆಗುವುದಿಲ್ಲ. ಆತ, ನಿರ್ಮಾಪಕ, ನಿರ್ದೇಶಕ, ಹೀರೋ ಅಲ್ಲ. ಫಿಲಂ ಇಂಡಸ್ಟ್ರಿಯಲ್ಲೇ ಇಲ್ಲ. ಆದರೆ ಹೀರೋಯಿನ್‍ಗಳನ್ನು ಟಾರ್ಗೆಟ್ ಮಾಡುತ್ತಿದ್ದಾನೆ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೆ ಪ್ರಶಾಂತ್ ಸಂಬರಗಿಯವರನ್ನು ಪ್ರಾಣಿಗೆ ಹೋಲಿಸಿದ ಅವರು, ನಾನು ಒಂದೇ ಸಿನಿಮಾ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ನಾನು 50 ಸಿನಿಮಾಗಳನ್ನು ಮಾಡಿದ್ದಾರೆ. ಆ ಹಂದಿ ವಿಕಿಪಿಡಿಯಾದಲ್ಲಿ ಹೋಗಿ ನೋಡಲಿ ಎಂದು ಹೇಳಿದ್ದಾರೆ. 50 ಪ್ರಾಜೆಕ್ಟ್ ಮಾಡಿದ್ದೇನೆ, ಪಂಚ ಭಾಷೆ ತಾರೆ, ನಾನು 16 ವರ್ಷ ಸಿನಿಮಾ ರಂಗದಲ್ಲಿದ್ದೇನೆ, ಇವರಿಗೆ ಬೆಳೆಯಲು ಸಾಧ್ಯವಿಲ್ಲ, ಬೆಳೆದವರನ್ನು ಕಾಲೆಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com