ಕುಡಿದ ಅಮಲಿನಲ್ಲಿ ನಟ ಹರ್ಷ ಗಲಾಟೆ: ಬುದ್ದಿವಾದ ಹೇಳಿ ಕಳುಹಿಸಿದ ಪೊಲೀಸರು

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣ ಹೊಗೆಯಾಡುತ್ತಿರುವ ಬೆನ್ನಲ್ಲೇ  ನಟನೋರ್ವ  ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ ಗಲಾಟೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಟ ಹರ್ಷ
ನಟ ಹರ್ಷ
Updated on: 

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣ ಹೊಗೆಯಾಡುತ್ತಿರುವ ಬೆನ್ನಲ್ಲೇ  ನಟನೋರ್ವ  ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ ಗಲಾಟೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಡರಾತ್ರಿ ರಾಜಾಹುಲಿ, ವರ್ಧನ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಸ್ಯಾಂಡಲ್ ವುಡ್ ನಟ ಹರ್ಷ ಖಾಸಗಿ ಅಪಾರ್ಟ್​ಮೆಂಟ್​​​ ಬಳಿ ಗೆಳೆಯರೊಂದಿಗೆ ಪಾನಗೋಷ್ಠಿ ಮಾಡುತ್ತಿದ್ದರು. ಈ ವೇಳೆ ಬೀಟ್ ನಲ್ಲಿದ್ದ ಬಾಗಲಗುಂಟೆ ಪೊಲೀಸರು ಓಪನ್ ಏರಿಯಾದಲ್ಲಿ ಮದ್ಯ ಸೇವೆನೆ ಮಾಡದಂತೆ  ಸೂಚಿಸಿದರು. 

ಇದೇ ವಿಚಾರಕ್ಕೆ ಕುಡಿದ ಮತ್ತಿನಲ್ಲಿದ್ದ ನಟ ಹರ್ಷ, ಅವರ ಜೊತೆಗಿದ್ದ ಸ್ನೇಹಿತರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ತಕ್ಷಣವೇ ಪೊಲೀಸರು ನಟ ಹರ್ಷ ಹಾಗೂ ಆತನ ಗೆಳೆಯರನ್ನು ವಶಕ್ಕೆ ಪಡೆದು, ನಂತರ ಮತ್ತೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com