ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಫಸ್ಟ್ ಲುಕ್ ಸೆಪ್ಟೆಂಬರ್ 24ಕ್ಕೆ ಅನಾವರಣ

"ವಿಂಡೋ ಸೀಟ್"ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಆಂಕರ್-ನಟ ಶೀತಲ್ ಶೆಟ್ಟಿ ಇದೇ ಗುರುವಾರ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಗೆ ತಯಾರಾಗಿದ್ದಾರೆ.
ಶೀಟಲ್ ಶೆಟ್ಟಿ
ಶೀಟಲ್ ಶೆಟ್ಟಿ
Updated on

"ವಿಂಡೋ ಸೀಟ್"ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಆಂಕರ್-ನಟ ಶೀತಲ್ ಶೆಟ್ಟಿ ಇದೇ ಗುರುವಾರ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಗೆ ತಯಾರಾಗಿದ್ದಾರೆ. ನಿರ್ದೇಶಕಿ ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪ್ರಕಟಣೆ ನೀಡಿದ್ದು, ಅಲ್ಲಿ ಅವರು ಚಿತ್ರದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ.

"ವಿಂಡೋ ಸೀಟ್" ನಲ್ಲಿ ಸಂಜಾನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ಜತೆಗೆ ನಿರೂಪ್ ಭಂಡಾರಿ ಮುಖ್ಯ ಪಾತ್ರದಲ್ಲಿದ್ದಾರೆ ಮತ್ತು ಫಸ್ಟ್ ಲುಕ್ ಅನ್ನು ಸೆಪ್ಟೆಂಬರ್ 24 ರಂದು ಬೆಳಿಗ್ಗೆ 11 ಗಂಟೆಗೆ ಅನಾವರಣಗೊಳಿಸಲಾಗುವುದು ”ಎಂದು ಅವರು ಹೇಳುತ್ತಾರೆ.

ಚಿತ್ರದ ಕಥೆಯನ್ನು ಶೀತಲ್ ಶೆಟ್ಟಿಯವರೇ ಬರೆದಿದ್ದು ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಆಗಿರಲಿದೆ.  ನಿರೂಪ್ ಭಂಡಾರಿ ಗಿಟಾರ್ ವಾದಕನ ಪಾತ್ರವನ್ನು ನಿರ್ವಹಿಸುತ್ತಿ್ದಾರೆ.  ಈ ಚಿತ್ರವನ್ನು ಫ್ಯಾಂಟಮ್ ನಿರ್ಮಾಪಕ ಮಂಜುನಾಥ್ ಗೌಡ ನಿರ್ಮಾಣ ಮಾಡುತ್ತಿದ್ದು ಸಧ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.  2020 ರ ಅಂತ್ಯದ ವೇಳೆಗೆ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕರ್ ಯೋಜಿಸಿದ್ದಾರೆ. "ವಿಂಡೋ ಸೀಟ್" ಗೆ  ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದು  ವಿಘ್ನೇಶ್ ರಾಜ್ ಛಾಯಾಗ್ರಹಣ ಇದೆ. ಇದರಲ್ಲಿ ರವಿಶಂಕರ್ ಸೂರಜ್ ಮತ್ತು ನಾಟಕ ಕಲಾವಿದೆ  ರೇಖಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com