'ಯೆಲ್ಲೋ ಬೋರ್ಡ್' ಚಿತ್ರದ ಮೂಲಕ ಪ್ರದೀಪ್ ಭರ್ಜರಿ ಕಮ್ ಬ್ಯಾಕ್!

ಟೈಗರ್ ಚಿತ್ರದ ಬಳಿಕ ನಟ ಪ್ರದೀಪ್ ಬರೊಬ್ಬರಿ 3 ವರ್ಷಗಳ ಬಳಿಕ 'ಯೆಲ್ಲೋ ಬೋರ್ಡ್' ಚಿತ್ರದ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ.
ಪ್ರದೀಪ್-ಯೆಲ್ಲೋ ಬೋರ್ಡ್
ಪ್ರದೀಪ್-ಯೆಲ್ಲೋ ಬೋರ್ಡ್

ಬೆಂಗಳೂರು: ಟೈಗರ್ ಚಿತ್ರದ ಬಳಿಕ ನಟ ಪ್ರದೀಪ್ ಬರೊಬ್ಬರಿ 3 ವರ್ಷಗಳ ಬಳಿಕ 'ಯೆಲ್ಲೋ ಬೋರ್ಡ್' ಚಿತ್ರದ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ.

ಕಳೆದ ವರ್ಷ ಸೆಟ್ಟೇರಿದ್ದ ಈ ಯೆಲ್ಲೋಬೋರ್ಡ್ ಚಿತ್ರದ ಟೀಸರ್ ಅನ್ನು ನಟ ಕಿಚ್ಚಾ ಸುದೀಪ್ ಬಿಡುಗಡೆ ಮಾಡಿದ್ದರು. ನವ ನಿರ್ದೇಶಕ ತ್ರಿಲೋಕ್ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿತ್ತು. ಪ್ರಸ್ತುತ ಯೆಲ್ಲೋಬೋರ್ಡ್ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿದೆ. 1 ಹಾಡು ಮತ್ತು 10 ದಿನಗಳ ಚಿತ್ರೀಕರಣ ಬಾಕಿ ಇದೆ.

ಒಬ್ಬ ಕಾರು ಚಾಲಕ ಮತ್ತು ಒಂದು ಕೊಲೆಯ ಸುತ್ತ ಚಿತ್ರಕಥೆ ಸುತ್ತುತ್ತದೆ. ನಾಯಕ ಪ್ರದೀಪ್ ತನ್ನದಲ್ಲದ ತಪ್ಪಿಗೆ ಕೊಲೆ ಆರೋಪ ಎದುರಿಸುತ್ತಾನೆ. ಕೊಲೆಗೆ ಕಾರಣವೇನು ಎಂಬುದನ್ನು ಚಾಲಕರುಗಳ ಸಹಾಯದೊಂದಿಗೆ ಅದನ್ನು ಹೇಗೆ ಭೇದಿಸುತ್ತಾನೆ ಎಂಬುದೇ ಚಿತ್ರದ ಕಥಾಹಂದರವಾಗಿದೆ. 

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ತ್ರಿಲೋಕ್ ರೆಡ್ಡಿ, ನಾನು ಚಾಲಕರೊಂದಿಗೆ ಮಾತನಾಡಿದ್ದೇನೆ. ಅವರು ನಿಜಕ್ಕೂ ಸಾಕಷ್ಟು ಅಂಶಗಳನ್ನು ತಿಳಿದುಕೊಂಡಿದ್ದಾರೆ. ನನಗೆ ಈ ಚಿತ್ರಕಥೆ ದೊರೆತಿದ್ದೂ ಕೂಡ ಚಾಲಕರೊಂದಿಗಿನ ಸಂಭಾಷಣೆ ವೇಳೆಯೇ ಎಂದು ಹೇಳಿದ್ದಾರೆ.

ಈ ಹಿಂದೆ ತ್ರಿಲೋಕ್ ರೆಡ್ಡಿ ಫರ್ಸ್ಟ್ ರ್ಯಾಂಕ್ ರಾಜು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಾಲಕನಾಗಿ ಪ್ರದೀಪ್ ನಾಯಕ. ಮಧ್ಯಮವರ್ಗದ ಹುಡುಗಿಯಾಗಿ ಅಹಲ್ಯ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸ್ನೇಹಖುಷಿ, ಮೋನಿಕಾ, ಸಾಧುಕೋಕಿಲ, ಭವಾನಿಪ್ರಕಾಶ್, ಅಮಿತ್,  ಶ್ರೀನಿವಾಸ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. 

ಚೇತನ್‍ಕುಮಾರ್, ಡಾ.ನಾಗೇಂದ್ರಪ್ರಸಾದ್, ಗೌಸ್‍ಪೀರ್ ಮತ್ತು ವಿಶ್ವಜಿತ್ ಸಾಹಿತ್ಯದ ಐದು ಹಾಡುಗಳಿಗೆ ಹೊಸ ಪ್ರತಿಭೆ ಅದ್ವಿಕ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರವೀಣ್, ಸಂಕಲನ ಗಿರಿಮಹೇಶ್, ಕಾರ್ಯಕಾರಿ ನಿರ್ಮಾಪಕ ನವೀನ್, ಮಾಸ್‍ಮಾದ ಸಾಹಸ ನಿರ್ದೇಶನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com