ರಕ್ಷಿತ್ ಶೆಟ್ಟಿ ಜೊತೆ ಮದುವೆ, ರಾಜಕೀಯ, ಸಿನಿಮಾ ಬದುಕು: ಎಲ್ಲಾದಕ್ಕೂ ಉತ್ತರ ಕೊಟ್ಟ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ

ಸಿನಿಮಾ ಬಿಟ್ಟು ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸ್ಯಾಂಡಲ್ವುಡ್ ನ ಕ್ವೀನ್ ರಮ್ಯಾ ಇದೀಗ ಕೆಲ ವರ್ಷಗಳಿಂದ ರಾಜಕೀಯದಲ್ಲೂ ಹೆಚ್ಚಾಗಿ ಕಾಣಿಸುತ್ತಿಲ್ಲ. ಇದೇ ವಿಚಾರವಾಗಿ ಕೆಲ ಅಭಿಮಾನಿಗಳು ನಾನಾ ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆಲ್ಲಾ ರಮ್ಯಾ ಉತ್ತರ ನೀಡಿದ್ದಾರೆ. 
ರಮ್ಯಾ-ರಕ್ಷಿತ್
ರಮ್ಯಾ-ರಕ್ಷಿತ್
Updated on: 

ಸಿನಿಮಾ ಬಿಟ್ಟು ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸ್ಯಾಂಡಲ್ವುಡ್ ನ ಕ್ವೀನ್ ರಮ್ಯಾ ಇದೀಗ ಕೆಲ ವರ್ಷಗಳಿಂದ ರಾಜಕೀಯದಲ್ಲೂ ಹೆಚ್ಚಾಗಿ ಕಾಣಿಸುತ್ತಿಲ್ಲ. ಇದೇ ವಿಚಾರವಾಗಿ ಕೆಲ ಅಭಿಮಾನಿಗಳು ನಾನಾ ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆಲ್ಲಾ ರಮ್ಯಾ ಉತ್ತರ ನೀಡಿದ್ದಾರೆ. 

ನಿನ್ನೆ ಇನ್ ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ರಮ್ಯಾ, ಸದ್ಯಕ್ಕೆ ಸಿನಿಮಾ ಮತ್ತು ರಾಜಕೀಯಕ್ಕೆ ಗುಡ್ ಹೇಳುವ ಸಮಯ ಬಂದಿದೆ ಎಂದಿದ್ದಾರೆ. 

ಇನ್ನು ಮದುವೆ ಕುರಿತಂತೆ ಅಭಿಮಾನಿಗಳು ನೀವು ನಟ ರಕ್ಷಿತ್ ಶೆಟ್ಟಿ ಅವರನ್ನು ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಕೂಲ್ ಆಗಿ ಉತ್ತರಿಸಿದ ಅವರು ಮದುವೆ, ಮದುವೆ, ಮದುವೆ ಪದ ಕೇಳಿ ಕೇಳಿ ಇದೀಗ ಆ ಮಾತು ಕೇಳಿದರೆ ಫನ್ನಿ ಎನ್ನಿಸುತ್ತಿದೆ. ಮದುವೆ ಆಗದೇ ಜೀವನದಲ್ಲಿ ಸುಖವಾಗಿರಲು ಸಾಧ್ಯ ಇಲ್ಲವಾ? ಎಂದು ಕೇಳಿದ್ದಾರೆ. 

ಮತ್ತೆ ಯಾವ ರೀತಿಯ ಹುಡುಗ ಬೇಕು ಎಂದು ಕೇಳಿದ ಪ್ರಶ್ನೆಗೆ, ಸಹಾನುಭೂತಿ, ಕರುಣೆ ಮತ್ತು ಮುಕ್ತ ಮನಸ್ಸು ಇರುವ ವ್ಯಕ್ತಿ ಬೇಕು ಎಂದು ಉತ್ತರಿಸಿದ್ದಾರೆ. ಇನ್ನು ಇದೇ ವೇಳೆ ತಾವು ಯಾರ ಜೊತೆಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com