ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್-2 ತೆರೆಗೆ ಬರಲು ಸಿದ್ಧವಾಗುತ್ತಿದೆ. ಯಶ್ ಅಭಿಮಾನಿಗಳು ತಮ್ಮ ಹೀರೋನನ್ನು ಬೃಹತ್ ಪರದೆ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಈ ವರಮಹಾಲಕ್ಷ್ಮಿಗೆ ಕೊರೋನಾ ಹಿನ್ನೆಲೆಯಲ್ಲಿ ಥಿಯೇಟರ್ ಸಂಪೂರ್ಣ ಭರ್ತಿ ಮಾಡದ ಹಿನ್ನೆಲೆಯಲ್ಲಿ ಸ್ಟಾರ್ ನಟರ ಯಾವುದೇ ಚಿತ್ರಗಳು ತೆರೆಗೆ ಬರುತ್ತಿಲ್ಲ.
ಈ ಮಧ್ಯೆ ಇಂದು ಕೆಜಿಎಫ್ ಚಾಪ್ಟರ್ -2 ತಂಡ ಒಂದು ಮುಖ್ಯವಾದ ಸಂಗತಿ ಹೊರಹಾಕಿದೆ. ಚಿತ್ರದ ಸ್ಯಾಟಲೈಟ್ ಹಕ್ಕು ದಕ್ಷಿಣ ಭಾಗದಲ್ಲಿ ಜೀ ವಾಹಿನಿಯ ಪಾಲಾಗಿದೆ ಎಂದು ತಿಳಿಸಿದೆ.
Advertisement