ಮುಂಬೈ: ವಿಶ್ವದ ಪ್ರತಿಷ್ಟಿತ ಚಲನಚಿತ್ರ ಪ್ರಶತಿಯಾದ ಆಸ್ಕರ್ಸ್ ರೇಸಿನಿಂದ ತಮಿಳು ಚಿತ್ರ 'ಕೂಳಂಗಳ್' ಹೊರಬಿದ್ದಿದೆ. ಅಂತಾರಾಷ್ಟ್ರೀಯ ವಿಭಾಗಕ್ಕೆ ಭಾರತದಿಂದ ಕೂಳಂಗಳ ಆಯ್ಕೆಯಾಗಿತ್ತು.
ಆಸ್ಕರ್ಸ್ ಪ್ರಶಸ್ತಿ ಕಣದಲ್ಲಿ ಭಾರತದ ಆಸೆ ಇನ್ನೂ ಜೀವಂತವಾಗಿದೆ. ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ 'ರೈಟಿಂಗ್ ವಿತ್ ಫೈರ್' ಮುಂದಿನ ಸುತ್ತಿಗೆ ಆಯ್ಕೆಯಾಗಿದೆ.
ದಲಿತ ಮಹಿಳೆ ನಿರ್ವಹಿಸುತ್ತಿರುವ ಏಕೈಕ ದಿನಪತ್ರಿಕೆ ಎನ್ನುವ ಹೆಸರಿಗೆ ಪಾತ್ರವಾದ 'ಖಬರ್ ಲಹರಿಯಾ' ಈ ಡಾಕ್ಯುಮೆಂಟರಿಯ ಕಥಾವಸ್ತು. ಈ ಸಾಕ್ಷ್ಯಚಿತ್ರವನ್ನು ಥಾಮಸ್ ಮತ್ತು ಸುಶ್ಮಿತಾ ಘೋಷ್ ನಿರ್ದೇಶಿಸಿದ್ದಾರೆ.
ಪ್ರಶಸ್ತಿ ಸುತ್ತಿನಿಂದ ಹೊರಬಿದ್ದ ಕೂಳಂಗಳ ತಮಿಳುಚಿತ್ರವನ್ನು ನಟಿ ನಯನತಾರ ಮತ್ತು ವಿಘ್ನೇಶ್ ಸಿವನ್ ನಿಮಿಸಿದ್ದಾರೆ ಎನ್ನುವುದು ವಿಶೇಷ.
Advertisement