ಥ್ರಿಲ್ಲರ್ ಕಥೆಯಾಧಾರಿತ ಕಥಾಚಿತ್ರದ ಮೂಲಕ ನಿರ್ದೇಶನದಲ್ಲಿ ನಟ ಕಿಶೋರ್ ಅದೃಷ್ಟ ಪರೀಕ್ಷೆ!

ಬಹುಮುಖ ನಟ ಕಿಶೋರ್ ಯಾವುದೇ ಪಾತ್ರವಾಗಲಿ, ಯಾವುದೇ ಭಾಷೆಯಲ್ಲಾಗಲಿ ಸಲಿಸಾಗಿ ಹೊಂದಿಕೊಳ್ಳುತ್ತಾರೆ. ಇದೀಗ ಥ್ರಿಲ್ಲರ್ ಚಿತ್ರದ ನಿರ್ದೇಶನದ ಮೂಲಕ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಕಿಶೋರ್
ಕಿಶೋರ್
Updated on: 

ಬಹುಮುಖ ನಟ ಕಿಶೋರ್ ಯಾವುದೇ ಪಾತ್ರವಾಗಲಿ, ಯಾವುದೇ ಭಾಷೆಯಲ್ಲಾಗಲಿ ಸಲಿಸಾಗಿ ಹೊಂದಿಕೊಳ್ಳುತ್ತಾರೆ. ಇದೀಗ ಥ್ರಿಲ್ಲರ್ ಚಿತ್ರದ ನಿರ್ದೇಶನದ ಮೂಲಕ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಫ್ಯಾಮಿಲಿ ಮ್ಯಾನ್ ಸೀಸನ್ 1ರಲ್ಲಿ ನಟಿಸಿ ಯಶಸ್ವಿಯಾಗಿದ್ದ ಕಿಶೋರ್ ಅದರಲ್ಲಿ ಪಾಷಾ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಇತ್ತೀಚಿಗೆ ಬಿಡುಗಡೆಯಾದ ಫ್ಯಾಮಿಲಿ ಮ್ಯಾನ್ 2ನಲ್ಲಿ ಭಾಗವಹಿಸಿಲ್ಲ. ಅದಕ್ಕೆ ಕಾರಣ ಈ ಪಾತ್ರ ಮೊದಲ ಭಾಗದಲ್ಲಿ ಸತ್ತಿರುವುದು. ಆ ಪಾತ್ರ ಬಹಳಷ್ಟು ಪದರಗಳನ್ನು ಹೊಂದಿರುವ ಆಸಕ್ತಿದಾಯಕ ಪಾತ್ರವಾಗಿತ್ತು. ಇದು ಉತ್ತಮ ತಿರುವು ಪಡೆಯುತ್ತಿತ್ತು ಆದರೆ ವಿಸ್ತರಿಸಲಾಗಲಿಲ್ಲ ಎಂದರು. 

ನಟ ಕಿಶೋರ್ ವಿಸ್ತಾರಾ ಬ್ಯಾನರ್ ಅಡಿಯಲ್ಲಿ ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ಕೆಲಸ ಮಾಡುತ್ತಿದ್ದು, ಇದು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕೆಲಸ ಇನ್ನೂ ನಡೆಯುತ್ತಿದೆ. ಈ ಎಲ್ಲಾ ಕ್ರೆಡಿಟ್ ಕೆಲಸ ಮಾಡುತ್ತಿರುವ ನಮ್ಮ ತಂತ್ರಜ್ಞರಿಗೆ ಸಿಗಬೇಕು. ಆ ಕ್ಷೇತ್ರದಲ್ಲಿ ನನ್ನ ಒಳಗೊಳ್ಳುವಿಕೆ ಕಡಿಮೆ. ಇನ್ನು ಶೀಘ್ರದಲ್ಲೇ ಚಿತ್ರ ಸಿದ್ಧವಾಗಲಿದೆ ಎಂದು ಹೊಸ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಕಿಶೋರ್ ಹೇಳುತ್ತಾರೆ. 

ತಮ್ಮ ಮುಂದಿನ ಯೋಜನೆಗೆ ತಾತ್ಕಾಲಿಕವಾಗಿ ಅಹನಿ ಎಂದು ಹೆಸರಿಸಲು ಯೋಜಿಸಿದ್ದೇವೆ. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಕಿಶೋರ್, ಶೀಘ್ರದಲ್ಲೇ ಅವರ ನಿರ್ದೇಶನದ ಸಾಮರ್ಥ್ಯಗಳನ್ನು ಪರೀಕ್ಷಿಸಲು ಸಜ್ಜಾಗಿದ್ದಾರೆ. ಅದರ ತಯಾರಿ ನಡೆಯುತ್ತಿದೆ. ಇದು ಥ್ರಿಲ್ಲರ್ ಚಿತ್ರವಾಗಲಿದೆ. ಬ್ಲ್ಯಾಕ್ ಅಂಡ್ ವೈಟ್‌ನಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದ ಶೆಲ್ಲಿ ಅವರು ಈ ಚಿತ್ರದ ಎಳೆಯನ್ನು ನೀಡಿದ್ದಾರೆ. 

ನಿರ್ದೇಶಕರಾಗುತ್ತಿರುವ ನಟ, ತಮ್ಮ ಚಿತ್ರವನ್ನು ಥ್ರಿಲ್ಲರ್ ಆಗಿ ಪ್ಯಾಕೇಜ್ ಮಾಡಲು ಯೋಜಿಸಿದ್ದಾರೆ. ಈ ಯೋಜನೆಯನ್ನು ತಮ್ಮ ಹೋಂ ಬ್ಯಾನರ್ ಅಡಿಯಲ್ಲಿ ಮಾಡಲಾಗುವುದು. ಇದು ಒಂದು ರಾತ್ರಿಯಲ್ಲಿ ನಡೆಯುವ ಪ್ರಯಾಣ ಆಧಾರಿತ ಕಥೆಯಾಗಿದ್ದು ಸಿದ್ಧತೆಗಳು ನಡೆಯುತ್ತಿವೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com