'ನೋ! ನರ್ತನ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಯಶ್ ನೌಕಾಪಡೆ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿಲ್ಲ'

ಕೆಜಿಎಫ್ -2 ಸಿನಿಮಾ ರಿಲೀಸ್ ಗಾಗಿ ನಟ ಯಶ್ ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಹಲವು ಊಹಾಪೋಹಾಗಳು ಹರಿದಾಡುತ್ತಿವೆ.
ಯಶ್
ಯಶ್
Updated on

ಕೆಜಿಎಫ್ -2 ಸಿನಿಮಾ ರಿಲೀಸ್ ಗಾಗಿ ನಟ ಯಶ್ ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಹಲವು ಊಹಾಪೋಹಾಗಳು ಹರಿದಾಡುತ್ತಿವೆ.

ಮುಫ್ತಿ ನಿರ್ದೇಶಕ ನರ್ತನ್ ಅವರ ಮುಂದಿನ ಸಿನಿಮಾದಲ್ಲಿ ಯಶ್ ನಟಿಸಲಿದ್ದು, ಇದು ಯಶ್ ಅವರ 19ನೇ ಸಿನಿಮಾ ಆಗಲಿದೆ, ಚಿತ್ರಕಥೆ ಚರ್ಚೆಯ ಹಂತದಲ್ಲಿದೆ, ಸಿನಿಮಾದಲ್ಲಿ ಯಶ್ ನೌಕಾ ಪಡೆ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ಸಂತಸಗೊಂಡಿದ್ದರು. ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಕೂಡ ನಟಿಸಲಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು, ಆದರೆ ಈ ವಿಷಯ ಸುಳ್ಳು ಎಂದು ಮತ್ತೊಮ್ಮೆ ಸಾಬೀತಾಗಿದೆ.

ಯಶ್ ಮತ್ತು ನರ್ತನ್ ಜೋಡಿಯ ಸಿನಿಮಾ ತಯಾರಾಗಲಿದೆ, ಆದರೆ ಇದನ್ನು ಬಿಟ್ಟು ಉಳಿದ ಎಲ್ಲಾ ಊಹಾಪೋಹಗಳು ಸುಳ್ಳು ಎಂದು ಮೂಲಗಳು ತಿಳಿಸಿವೆ.

ಯಶ್ ಸದ್ಯ ಕೆಜಿಎಫ್ 2 ಸಿನಿಮಾ ಕಡೆ ತಮ್ಮ ಗಮನ ಹರಿಸುತ್ತಿದ್ದಾರೆ. ಹೀಗಾಗಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಪ್ ಸಿನಿಮಾ ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ತಯಾರಾಗುತ್ತಿದ್ದು, ಜುಲೈ 16 ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು.

ಆದರೆ ಕೊರೋನಾ ಲಾಕ್ ಡೌನ್ ನಿಂದಾಗಿ ಸಿನಿಮಾ ಬಿಡುಗಡೆ ಮುಂದೂಡುವ ಸಾಧ್ಯತೆಯಿದೆ,  ಪ್ರೊಡಕ್ಷನ್ ಹೌಸ್ ತಮ್ಮ ರಿಲೀಸ್ ಪ್ಲಾನ್ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಕೆಜಿಎಫ್ -2 ಬಹು  ನೀರಿಕ್ಷಿತ ಸಿನಿಮಾವಾಗಿದ್ದು,  ವಿಶ್ವಾದ್ಯಂತ ಅಭಿಮಾನಿಗಳು ರಾಕಿ ಭಾಯ್ ಅವತಾರ ನೋಡಲು ಕಾತುರರಾಗಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com