ಗೂಗಲ್ ನಿಂದ ಮತ್ತೊಂದು ಎಡವಟ್ಟು: ತಮಿಳಿನ 'ವೇದ' ಪಾತ್ರವರ್ಗದಲ್ಲಿ ಡಾ. ರಾಜ್ ಫೋಟೋ ಅಭಿಮಾನಿಗಳ ಆಕ್ರೋಶ

ಇತ್ತೀಚಿಗೆ ಕನ್ನಡ ಭಾಷೆಯನ್ನು ಅತ್ಯಂತ ಕೆಟ್ಟ ಭಾಷೆ ಎಂದು ತೋರಿಸಿ ಅಪಮಾನ ಮಾಡಿದ್ದ ಗೂಗಲ್ ಮತ್ತೊಂದು ಎಡವಟ್ಟು ಮಾಡಿದೆ.
ಡಾ. ರಾಜ್  ಫೋಟೋದೊಂದಿಗೆ ರಾಘಣ್ಣ, ಶಿವಣ್ಣ, ಪುನೀತ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಫೋಟೋ ಚಿತ್ರ
ಡಾ. ರಾಜ್ ಫೋಟೋದೊಂದಿಗೆ ರಾಘಣ್ಣ, ಶಿವಣ್ಣ, ಪುನೀತ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಫೋಟೋ ಚಿತ್ರ
Updated on: 

ಬೆಂಗಳೂರು: ಇತ್ತೀಚಿಗೆ ಕನ್ನಡ ಭಾಷೆಯನ್ನು ಅತ್ಯಂತ ಕೆಟ್ಟ ಭಾಷೆ ಎಂದು ತೋರಿಸಿ ಅಪಮಾನ ಮಾಡಿದ್ದ ಗೂಗಲ್ ಮತ್ತೊಂದು ಎಡವಟ್ಟು ಮಾಡಿದೆ.

ತಮಿಳು ಚಿತ್ರವೊಂದರ ಗೂಗಲ್ ಪುಟದಲ್ಲಿ ಕನ್ನಡ ಚಿತ್ರರಂಗದ ಮೇರುನಟ ದಿವಂಗತ ಡಾ. ರಾಜ್ ಕುಮಾರ್ ಅವರ ಫೋಟೋವನ್ನು ತಪ್ಪಾದ ಹೆಸರಿನಲ್ಲಿ ತೋರಿಸಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಅಭಿಮಾನಿಗಳು ಕೂಡಲೇ ಅದನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

ಆರ್ ಮಾಧವನ್ ಮತ್ತು ಸೇತುಪತಿ ವಿಜಯ್ ಅಭಿಯನದ ತಮಿಳಿನ ವಿಕ್ರಮ್ ವೇದ ಸಿನಿಮಾ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಕೊಟ್ಟರೆ ಸಿನಿಮಾ ಪಾತ್ರವರ್ಗದವರ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಹೆಸರೂ ಇದೆ. ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ ತೋರಿಸುತ್ತಿದ್ದು, ಹಾಫ್ ಬಾಯಿಲ್ಡ್ (ಅರೆಬೆಂದ ಪಾತ್ರ) ಎಂದು ಅವಮಾನ ಮಾಡಲಾಗಿದೆ. 

ಸ್ಯಾಂಡಲ್ ವುಡ್ ನ ನಟ ನಿರ್ದೇಶಕ ರಿಷಬ್ ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಸ್ತಾಪಿಸಿದ್ದು, ಗೂಗಲ್ ಗೆ ರಿಪೋರ್ಟ್ ಮಾಡುವಂತೆ ಕರೆ ನೀಡಿದ್ದಾರೆ. ನಟ ಪಿಡಿ ಸತೀಶ್ ಚಂದ್ರ ಕೂಡಾ ಇದೇ ರೀತಿಯ ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com