
ಹಾಲಿವುಡ್: ಬ್ಲಾಕ್ ಬಸ್ಟರ್ ಹಾಲಿವುಡ್ ನ ಅವತಾರ್ ಸಿನಿಮಾದ ಎರಡನೇ ಅವತರಣಿಕೆಯ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗಗೊಳಿಸಿದೆ. ಮುಂದಿನ ವರ್ಷ ಡಿಸೆಂಬರ್ 16 ರಂದು ಅವತಾರ್2, ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.
ಅವತಾರ್ ಮೊದಲ ಭಾಗದಲ್ಲಿ ನಾಯಕ ನಾಯಕಿ ಪಾತ್ರ ನಿರ್ವಹಿಸಿದ್ದ ಸ್ಯಾಮ್ ವರ್ದಿಂಗ್ಟನ್ ಮತ್ತು ಜೋಯಿ ಸಲ್ದಾನ ಎರಡನೇ ಭಾಗದಲ್ಲೂ ಮುಂದುವರಿದಿದ್ದಾರೆ.
ಇನ್ನುಳಿದಂತೆ ಮೊದಲ ಭಾಗದ ಕೆಲ ನಟರನ್ನಷ್ಟೇ ಉಳಿಸಿಕೊಳ್ಲಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎರಡನೇ ಭಾಗದಲ್ಲಿ ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್ ಲೆಟ್ ಸೇರ್ಪಡೆಗೊಂಡಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡುವ ವಿಷಯ.
ಇದರೊಂದಿಗೆ ಡಿಸ್ನಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಡಿಸ್ನಿ ತನ್ನ ಸಂಸ್ಥೆಯಿಂದ ಮುಂಬರಲಿವ ಸಿನಿಮಾಗಳ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಡಾಕ್ಟರ್ ಸ್ಟ್ರೇಂಜ್ ಮುಂದಿನ ವರ್ಷ ಮಾರ್ಚ್ 25, ಥಾರ್ ಮುಂದಿನ ವರ್ಷ ಮೇ6, ಬ್ಲ್ಯಾಕ್ ಪ್ಯಾಂಥರ್ ಜುಲೈ8, ಬ್ಲೇಡ್ 2022 ಅಕ್ಟೋಬರ್ 7 ಮಾರ್ವೆಲ್ಸ್ 2022 ನವೆಂಬರ್ 22ರಂದು ಬಿಡುಗಡೆಗೊಳ್ಳುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.
'ಟಗರು' ಯಶಸ್ಸಿನ ನಂತರ ಹೊಸ ಸಿನಿಮಾಗಾಗಿ ಸೂರಿ-ಶಿವರಾಜ್ ಕುಮಾರ್ ಮಾತುಕತೆ!
ಕೋಟಿಗೊಬ್ಬ-3 ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್; ಗುರುವಾರ ಟ್ರೈಲರ್ ಬಿಡುಗಡೆ
ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ, ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ
ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ
ಸೂರಿ 'ಬ್ಯಾಡ್ ಮ್ಯಾನರ್ಸ್' ನಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿಷೇಕ್!
ತಾಯಿಯ ಸಾವಿನ ಬೆನ್ನಲ್ಲೇ ಕರ್ನಾಟಕ ಬಿಟ್ಟು ಹೋಗುವುದಾಗಿ ಹೇಳಿದ ನಟಿ ವಿಜಯಲಕ್ಷ್ಮಿ!
Advertisement