ಬೆಂಗಳೂರು: ಸದ್ಯ ಗುರು ಶಿಷ್ಯರು ಸಿನಿಮಾ ಚಿತ್ರೀಕರಣದಲ್ಲಿ ಬಿಝಿಯಾಗಿರುವ ನಟ ಶರಣ್, 'ಕರ್ವ' ನಿರ್ದೇಶಕ ನವನೀತ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರ ಸಂಪೂರ್ಣ ಹಾರರ್ ಸಿನಿಮಾ ಎನ್ನಲಾಗಿದೆ. ತರುಣ್ ಶಿವಪ್ಪ ಈ ಸಿನಿಮಾ ನಿರ್ಮಾಪಕರು. ನಿರ್ದೇಶಕ ಅವರ ರೋಸ್, ವಿಕ್ಟರಿ2 ಸಿನಿಮಾಗಳನ್ನು ಈ ಹಿಂದೆ ಅವರೇ ನಿರ್ಮಾಣ ಮಾಡಿದ್ದರು.
50 ದಿನಗಳ ಹಿಂದೆ ನವನೀತ್ ಅವರು ಶರಣ್ ಅವರಿಗೆ ಹೊಸ ಸಿನಿಮಾದ ಕಥೆ ಹೇಳಿದ್ದರಂತೆ. ಕಥೆ ಕೇಳುತ್ತಲೇ ಇಂಪ್ರೆಸ್ ಆದ ಶರಣ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಈ ಹಿಂದೆ ಕರ್ವ ಮತ್ತು ಬಕಾಸುರ ಸಿನಿಮಾಗಳನ್ನು ನಿರ್ದೇಶಿಸಿರುವ ನವನೀತ್ ಅವರಿಗೆ ಇದು ಮೂರನೇ ಸಿನಿಮಾ.
ಸಿನಿಮಾದ ಶೇ.80ರಷ್ಟು ಭಾಗ ಉತ್ತರಾಖಂಡದ ಹಿಮಚ್ಛಾದಿತ ಪ್ರದೇಶಗಳಲ್ಲಿ ನಡೆಯುವುದು ಎಂದು ನಿರ್ದೇಶಕರು ಹೇಳಿದ್ದಾರೆ. ಸೆನಿಮೆಟೊಗ್ರಾಫರ್ ಆಗಿ ಅನುಪ್ ಕಟ್ಟುಕರನ್ ಅವರು ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಹಲವು ಜನಪ್ರಿಯ ಜಾಹೀರಾತುಗಳಿಗೆ ಸಿನಿಮೆಟೊಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾ.
ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ದುನಿಯಾ ವಿಜಯ್ ಸಿನಿಮಾ 'ಸಲಗ''
ಅನಿತಾ ಭಟ್ ನಿರ್ಮಾಣದ 'ಇಂದಿರಾ' ಮೋಷನ್ ಫೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್
ಬೇರೆ ಸಂಬಂಧ ಹಾಗೂ ಗರ್ಭಪಾತದ ಕುರಿತು ನಟಿ ಸಮಂತಾ ರುತ್ ಪ್ರಭು ಹೇಳಿದ್ದೇನು?
'ಭಜರಂಗಿ 2' ನಾಯಕಿ ಪೋಸ್ಟರ್ ಬಿಡುಗಡೆ; ಭಾವನಾ ಮೆನನ್ ಲುಕ್ ಗೆ ಫ್ಯಾನ್ಸ್ ಫಿದಾ!
ಮಿಮಿಕ್ರಿ ದಯಾನಂದ್ ಚೊಚ್ಚಲ ನಿರ್ದೇಶನದ 'ಅನಿರೀಕ್ಷಿತ' ಚಿತ್ರಕ್ಕೆ ಪ್ರಶಸ್ತಿಯ ಗರಿ!
Advertisement