ಟಾಲಿವುಡ್ ಹಿರಿಯ ನಟ ರಾಜಬಾಬು ನಿಧನ

ತೆಲುಗು ಚಿತ್ರರಂಗದ ಹಿರಿಯ ಪೋಷಕ ನಟ ರಾಜಬಾಬು ನಿಧನರಾಗಿದ್ದಾರೆ. 
ರಾಜಾಬಾಬು
ರಾಜಾಬಾಬು
Updated on: 

ಹೈದರಾಬಾದ್‌: ತೆಲುಗು ಚಿತ್ರರಂಗದ ಹಿರಿಯ ಪೋಷಕ ನಟ ರಾಜಬಾಬು ನಿಧನರಾಗಿದ್ದಾರೆ. 

ಅವರಿಗೆ  64 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ರಾತ್ರಿ ನಿಧನ ಹೊಂದಿದರು. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ನರಸಾಪುರಪೇಟೆಯ ರಾಜಬಾಬು ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. 

1995ರಲ್ಲಿ 'ಉರಿಕಿ ಮೊನಗಾಡು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅವರು "ಸಿಂಧೂರಂ, ಸಮುದ್ರಂ, ಆಡವಾರಿ ಮಾಟಲಕು ಅರ್ಥಾಲೇ ವೆರುಲೆ, ಮುರಾರಿ, ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು, ಬ್ರಹ್ಮೋತ್ಸವಂ, ಭರತ್ ಆನೆ  ನೇನು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ದಾಸರಿ ನಾರಾಯಣ ರಾವ್ ನಿರ್ದೇಶನದಲ್ಲಿ 'ಸ್ವರ್ಗಂ-ನರಕಂ' ಹಾಗೂ 'ರಾಧಮ್ಮ ಪೆಳ್ಳಿ' ಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ, ಅವರು ಈವರೆಗೆ ಸುಮಾರು 48 ಕಿರುತೆರೆಯ ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com