ಧೀರೇನ್ ರಾಮ್‌ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಶಿವ 143' ಆಗಸ್ಟ್ 26 ರಂದು ತೆರೆಗೆ

ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ನಟ ಧೀರೇನ್ ರಾಮ್‌ಕುಮಾರ್ ಹಾಗೂ ಮಾನ್ವಿತಾ ಕಾಮತ್ ಅಭಿನಯದ ಬಹುನಿರೀಕ್ಷಿತ ಚೊಚ್ಚಲ ಚಿತ್ರ 'ಶಿವ 143' ಅಂತಿಮವಾಗಿ ಮಂಗಳವಾರ ಬಿಡುಗಡೆ ದಿನಾಂಕ ಘೋಷಿಸಿದ್ದು, ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 26 ರಂದು ತೆರೆಗೆ ಬರಲಿದೆ. 
ಧೀರೇನ್ ರಾಮ್‌ಕುಮಾರ್ - ಮಾನ್ವಿತಾ
ಧೀರೇನ್ ರಾಮ್‌ಕುಮಾರ್ - ಮಾನ್ವಿತಾ
Updated on: 

ಬೆಂಗಳೂರು: ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ನಟ ಧೀರೇನ್ ರಾಮ್‌ಕುಮಾರ್ ಹಾಗೂ ಮಾನ್ವಿತಾ ಕಾಮತ್ ಅಭಿನಯದ ಬಹುನಿರೀಕ್ಷಿತ ಚೊಚ್ಚಲ ಚಿತ್ರ 'ಶಿವ 143' ಅಂತಿಮವಾಗಿ ಮಂಗಳವಾರ ಬಿಡುಗಡೆ ದಿನಾಂಕ ಘೋಷಿಸಿದ್ದು, ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 26 ರಂದು ತೆರೆಗೆ ಬರಲಿದೆ. 

ಧೀರೇನ್ ರಾಜ್‌ಕುಮಾರ್ ಅವರು ಡಾ. ರಾಜ್ ಕುಮಾರ್ ಕುಟುಂಬದಿಂದ ಬರುವ ಮತ್ತೊಬ್ಬ ನಟರಾಗಿದ್ದು, ಅವರ ಚೊಚ್ಚಲ ಚಿತ್ರ ಸಾಹಸ, ಆಕ್ಷನ್ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಶಿವ 143 ಚಿತ್ರ ತೆಲುಗು ಹಿಟ್ ಸಿನಿಮಾ, RX 100 ಚಿತ್ರದ ಛಾಯೆ ಇದೆ ಎಂದು ವರದಿಯಾಗಿದೆ. ತೆಲುಗಿನಲ್ಲಿ ಕಾರ್ತಿಕೇಯ ಮತ್ತು ಪಾಯಲ್ ರಜಪೂತ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು.

ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಈ ಚಿತ್ರದಲ್ಲಿ ಸಾಧು ಕೋಕಿಲ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com