Anushka48: ಚೆಫ್ ರೂಪದಲ್ಲಿ ಅನುಷ್ಕಾ ಶೆಟ್ಟಿ, ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ!

ನಟಿ ಅನುಷ್ಕಾ ಶೆಟ್ಟಿ ಅವರ ಮುಂಬರುವ ಚಿತ್ರದ ತಾತ್ಕಾಲಿಕವಾಗಿ ಅನುಷ್ಕಾ48 ಎಂದು ಹೆಸರಿಟ್ಟಿರುವ ಸಿನಿಮಾದಲ್ಲಿನ ಪಾತ್ರದ ಪೋಸ್ಟರ್ ಅನ್ನು ನಟಿಯ ಹುಟ್ಟುಹಬ್ಬದ ಸಂದರ್ಭಕ್ಕಾಗಿ ಚಿತ್ರತಂಡ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ.
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ
Updated on: 

ನಟಿ ಅನುಷ್ಕಾ ಶೆಟ್ಟಿ ಅವರ ಮುಂಬರುವ ಚಿತ್ರದ ತಾತ್ಕಾಲಿಕವಾಗಿ ಅನುಷ್ಕಾ48 ಎಂದು ಹೆಸರಿಟ್ಟಿರುವ ಸಿನಿಮಾದಲ್ಲಿನ ಪಾತ್ರದ ಪೋಸ್ಟರ್ ಅನ್ನು ನಟಿಯ ಹುಟ್ಟುಹಬ್ಬದ ಸಂದರ್ಭಕ್ಕಾಗಿ ಚಿತ್ರತಂಡ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ.

ನಟಿ ಅನ್ವಿತಾ ರಾವಾಲಿ ಶೆಟ್ಟಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಪೋಸ್ಟರ್‌ನಲ್ಲಿ ಅವರು ಶೆಫ್ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರವು ವಿಶಿಷ್ಟವಾದ ಥ್ರಿಲ್ಲರ್ ಮತ್ತು ಕಥೆ ಹಾಗೂ ಪಾತ್ರದ ಪ್ರತಿಯೊಂದು ಅಂಶವು ತುಂಬಾ ಅಸಾಮಾನ್ಯವಾಗಿದೆ ಮತ್ತು ಚೆನ್ನಾಗಿ ಮೂಡಿಬಂದಿದೆ... ಈ ಸ್ಕ್ರಿಪ್ಟ್‌ನಲ್ಲಿ ನಿರ್ದೇಶಕರು ಪ್ರೇಮಕಥೆಯನ್ನು ಅಳವಡಿಸಿರುವ ರೀತಿಯನ್ನು ಅನುಷ್ಕಾ ಇಷ್ಟಪಟ್ಟಿದ್ದಾರೆ ಮತ್ತು ನವೀನ್ ಅವರೊಂದಿಗಿನ ಅವರ ಕೆಮಿಸ್ಟ್ರಿ ಚಿತ್ರದ ಹೈಲೈಟ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಮೇಕ್ ಓವರ್‌ಗೆ ಹೋಗಿದ್ದಾರೆ ಮತ್ತು ಚಿತ್ರದಲ್ಲಿ ಸಂಪೂರ್ಣವಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲವೊಂದು ಈ ಹಿಂದೆ ಚಿತ್ರದ ಬಗ್ಗೆ ಹೇಳಿತ್ತು.

ಮಿರ್ಚಿ (2013) ಮತ್ತು ಭಾಗಮತಿ (2018) ನಂತರ UV ಕ್ರಿಯೇಷನ್ಸ್‌ ಅಡಿ ನಿರ್ಮಾಣವಾಗುತ್ತಿರುವ ಹೊಸ ಯುಗದ ಥ್ರಿಲ್ಲರ್ ಎಂದು ಸೂಚಿಸಲಾದ ಈ ಚಿತ್ರವು ಅನುಷ್ಕಾ ಅವರ ಮೂರನೇ ಸಹಯೋಗವಾಗಿದೆ.
ನವೀನ್ ಪೋಲಿಶೆಟ್ಟಿ ಕೂಡ ನಟಿಸಿರುವ ಈ ಚಿತ್ರವನ್ನು ರಾರಾ ಕೃಷ್ಣಯ್ಯ ಖ್ಯಾತಿಯ ಪಿ ಮಹೇಶ್ ಬಾಬು ನಿರ್ದೇಶಿಸುತ್ತಿದ್ದಾರೆ.

ನಿರ್ಮಾಪಕರು ಚಿತ್ರವನ್ನು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com